ಮ೦ಗಳೂರು: ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯ ಅಭಿವೃದ್ಧಿಯತ್ತ ತನ್ನ ಅಚಲ ಬದ್ಧತೆಯ ಭಾಗವಾಗಿ, ಎಂಸಿಸಿ ಬ್ಯಾಂಕ್ ಮಂಗಳೂರು, ಉಡುಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ್ಯಂತ ವಿವಿಧ ಶಾಲೆಗಳು,ಅನಾಥಾಶ್ರಮಗಳು ಮತ್ತು ಸಂಸ್ಥೆಗಳಿಗೆ ನೋಟ್ ಪುಸ್ತಕ, ಕೊಡೆ ಮತು ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಮತ್ತು ನಿರ್ದೇಶಕರ ಮಂಡಳಿಯ ನೇತೃತ್ವದಲ್ಲಿ ನಡೆಯುತ್ತಿರುವ ಈ ಚಟುವಟಿಕೆಗಳು, ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸಲು ಮತ್ತು ಶೈಕ್ಷಣಿಕ ಸಬಲೀಕರಣವನ್ನು ಉತ್ತೇಜಿಸಲುಬ್ಯಾಂಕಿನ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತವೆ.

ಪಡುಕೋಣೆಯ ಸೈಂಟ್ ಆಂಟನಿ ಪ್ರಾಥಮಿಕ ಶಾಲೆ,ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ, ಕುಂದಾಪುರದಸೈಂಟ್ ಮೇರಿ ಶಾಲೆ, ಕುಂದಾಪುರದ ಸೈಂಟ್ ಜೋಸೆಫ್ಪ್ರಾಥಮಿಕ ಮತ್ತು ಪ್ರೌಢಶಾಲೆ, ಬ್ರಹ್ಮಾವರದ ನಿರ್ಮಲಾ
ಪ್ರೌಢಶಾಲೆ ಮತ್ತುಕೊಸ್ಮೊಪೊಲಿಟನ್ ಹಿರಿಯ ಪ್ರಾಥಮಿಕಶಾಲೆ, ಮಂಗಳೂರಿನ ಕೂಳೂರು ಪ್ರೌಢಶಾಲೆ, ಬಿಜೈಯ ಸೈಂಟ್ ಅಂಜೆಲಾ ಹೋಂ, ಡಿ ಮರ್ಸಿಡ್ ಅನಾಥಾಶ್ರಮ, ಪಾನೀರ್,ಪಾಲಡ್ಕದ ಸೈಂಟ್ ಇಗ್ನೇಷಿಯಸ್ ಲೊಯೊಲಾ ಶಾಲೆ, ಜೆಪ್ಪುವಿನ ಸೈಂಟ್ ರೀಟಾ ಹಿರಿಯ ಪ್ರಾಥಮಿಕ ಶಾಲೆ, ಉರ್ವಾದದ ಲೇಡಿಹಿಲ್ ಹಿರಿಯಪ್ರಾಥಮಿಕ ಶಾಲೆ ಮತ್ತು ಪುತ್ತೂರಿನ ಮಾಯ್ ದೆ ದೆವೂಸ್ ಹಿರಿಯ ಪ್ರಾಥಮಿಕ ಶಾಲೆಯ ಅರ್ಥಿಕವಾಗಿ ಹಿಂದುಳಿದವಿದ್ಯಾರ್ಥಿಗಳಿಗೆ ನೋಟ್ ಬುಕ್, ಶಾಲಾ ಬ್ಯಾಗ್ ಮತ್ತುಕೊಡೆಗಳನ್ನು ವಿತರಣೆ ಮಾಡಲಾಯಿತು. ಜೆಪ್ಪುವಿನ ಸಂತ ಅಂತೋನಿ ಆಶ್ರಮದ ನಿವಾಸಿಗಳಿಗೆ ಕೊಡೆಗಳನ್ನುವಿತರಿಸಲಾಯಿತು.
ಬ್ಯಾಂಕಿನ ಈ ಉದಾತ್ತ ಕಾರ್ಯಕ್ಕೆ ಮೇಲ್ಕಂಡ ಸಂಸ್ಥೆಗಳಮುಖ್ಯಸ್ಥರು, ವಿದ್ಯಾ ಸಂಸ್ಥೆಗಳಲ್ಲಿ ಓದುತ್ತಿರುವ ಬಡಮಕ್ಕಳು ಮತ್ತು ಆಶ್ರಮದ ನಿವಾಸಿಗಳ ಬಗ್ಗೆ ಔದಾರ್ಯ ಮತ್ತು ಕಾಳಜಿಯನ್ನು ತೋರಿಸಿದ್ದಕ್ಕಾಗಿ ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಬ್ಯಾಂಕಿನ ನಿರ್ದೇಶಕರಾದ ಡಾ ಜೆರಾಲ್ಡ್ ಪಿಂಟೊ,ಹೆರಾಲ್ಡ್ ಮೊಂತೇರೊ,ಆಂಡ್ರೂ ಡಿಸೋಜಾ,ಐರಿನ್ ರೆಬೆಲ್ಲೊ, ರೋಶನ್ ಡಿಸೋಜಾ, ಶರ್ಮಿಳಾ ಮಿನೇಜಸ್, ಜೆ.ಪಿ. ರೊಡ್ರಿಗಸ್ , ಸುಶಾ೦ತ್ ಸಲ್ದಾನ, ಎಲರಾಯ್ ಕಿರಣ್ ಕ್ರಾಸ್ಗಾ, ವಿವಿಧ ಶಾಖೆಗಳ ಪ್ರಬ೦ಧಕರು ಉಪಸ್ಥಿತರಿದ್ದರು.


