ಮ೦ಗಳೂರು: ಬೆಳ್ತಂಗಡಿ ಉಜಿರೆಯ ವಸತಿಗೃಹವೊ೦ದರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಿಕ್ಕಮಗಳೂರು ನಿವಾಸಿ ಬಾಳಪ್ಪ ಎಂ ಕಳ್ಳೊಳ್ಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ದಿನಾಂಕ:1-3-2014 ರಂದು ಮದ್ಯಾಹ್ನ ವೇಳೆ, ಪ್ರಕರಣ ಆರೊಪಿ , ಚಿಕ್ಕಮಗಳೂರಿನ ಬಾಳಪ್ಪ ಎಂ ಕಳ್ಳೊಳ್ಳಿ ಎಂಬಾತ ಓವ೯ ಮಹಿಳೆಯೊಂದಿಗೆ ಬಂದು ವಸತಿಗೃಹದಲ್ಲಿ ರೂಂ ಪಡೆದುಕೊಂಡಿದ್ದ. ಆ ದಿನ ರಾತ್ರಿ ವೇಳೆ ಸದ್ರಿ ರೂಂ ಬಳಿ ಹೋಗಿ ನೋಡಲಾಗಿ ಆರೋಪಿಯೊಂದಿಗೆ ರೂಂ ನಲ್ಲಿ ತಂಗಿದ್ದ ಮಹಿಳೆಯು ಬಾತ್ ರೂಂ ನಲ್ಲಿ ಅರೆನಗ್ನಳಾಗಿ ಮೃತಪಟ್ಟು ಬಿದ್ದುಕೊಂಡಿದ್ದು, ಆಕೆಯ ಜೊತೆಗಿದ್ದ ಆರೋಪಿಯು ಆಕೆಯನ್ನು ಯಾವುದೋ ಕಾರಣ ಮತ್ತು ಉದ್ದೇಶದಿಂದ ಕೊಲೆಮಾಡಿ ಕೊಠಡಿಯ ಬಾಗಿಲನ್ನು ಹೊರಗಡೆಯಿಂದ ಚಿಲಕ ಹಾಕಿ ಪರಾರಿಯಾಗಿದ್ದ. ಮೃತ ಮಹಿಳೆ ಚಿಕ್ಕಮಗಳೂರಿನ ನಿವಾಸಿ ಭಾಗ್ಯ ಎಂಬುದಾಗಿ ತಿಳಿದುಬಂದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿ ಬಾಳಪ್ಪ ಎಂ ಕಳ್ಳೊಳ್ಳಿ ಎಂಬಾತನನ್ನು ಬಂಧಿಸಲಾಗಿತ್ತು. ವಿಚಾರಣೆ ನಡೆಸಿ ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕರಾದ ಲಿಂಗಪ್ಪ ಪೂಜಾರಿ ಅವರು ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಬೆಳ್ತಂಗಡಿ ಸಿಜೆ ಮತ್ತು ಜೆಎ೦ಎಫ್ ಸಿ ನ್ಯಾಯಾಲಯಕ್ಕೆ ದೋಷರೊಪಾಣಾ ಪಟ್ಟಿಯನ್ನು ಸಲ್ಲಿಸಿದ್ದರು. ಸದ್ರಿ ಪ್ರಕರಣದಲ್ಲಿ ಹೆಚ್ಚುವರಿಯಾಗಿ ಅಳವಡಿಸಲಾದ ಪರಿಶಿಷ್ಟ ಜಾತಿ ಮತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಗೆ ಸಂಬಂಧಿಸಿ, ತನಿಖೆ ನಡೆಸಿದ ಆಗಿನ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ ರಾಹುಲ್ ಕುಮಾರ್ ಶಹಪುರ್ ಅವರು ಹೆಚ್ಚುವರಿ ದೋಷಾರೋಪಣಾ ಪಟ್ಟಿಯನ್ನು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತು ಸತ್ರ ನ್ಯಾಯಾಲಯ ಸಲ್ಲಿಸಿದ್ದರು. ಸದ್ರಿ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ಮತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ಅವರು ದಿನಾಂಕ: 28.8.2025 ರಂದು ಆರೋಪಿ ಬಾಳಪ್ಪ ಎಂ ಕಳ್ಳೊಳ್ಳಿ ಎಂಬಾತನಿಗೆ IPC ಸೆಕ್ಷನ್ 302 ರಡಿಯಲ್ಲಿ – ಜೀವಾವಧಿ ಶಿಕ್ಷೆ + ರೂ.15,000/- ದಂಡ (ಪಾವತಿಸದಿದ್ದರೆ 6 ತಿಂಗಳು ಹೆಚ್ಚುವರಿ ಜೈಲು)., IPC ಸೆಕ್ಷನ್ 201 ರಡಿಯಲ್ಲಿ– 2 ವರ್ಷಗಳ ಸರಳ ಜೈಲು + ರೂ.5,000/- ದಂಡ (ಪಾವತಿಸದಿದ್ದರೆ 3 ತಿಂಗಳು ಹೆಚ್ಚುವರಿ ಜೈಲು) ವಿಧಿಸಿ ಅದೇಶಿಸಿದ್ದಾರೆ. .
ಪ್ರಕರಣದ ವಿಚಾರಣೆಯಲ್ಲಿ ಸರ್ಕಾರಿ ಅಭಿಯೋಜಕರಾಗಿ ಜ್ಯೋತಿ ಪಿ ನಾಯಕ್ ರವರು ವಾದ ಮಂಡಿಸಿರುತಾರೆ. ಪ್ರಕರಣದ ತನಿಖೆಯಲ್ಲಿ ತನಿಖಾ ಸಹಾಯಕರಾಗಿ ಎ.ಎಸ್.ಐ ಕಲೈಮಾರ್ ರವರು ಹಾಗೂ ನ್ಯಾಯಾಲಯ ಸಿಬ್ಬಂದಿಯಾಗಿ ಮಲ್ಲಿಕಾರ್ಜುನ್ ಅವರು ಕರ್ತವ್ಯ ನಿರ್ವಹಿಸಿರುತ್ತಾರೆ.


