ಮ೦ಗಳೂರು: ಸುರತ್ಕಲ್ ಗ್ರಾಮದ ಮುಕ್ಕದಲ್ಲಿ ಲೇಔಟ್ ವೊ೦ದರಲ್ಲಿ ಸಹ ಕಾಮಿ೯ಕನನ್ನು ಕಬ್ಬಿಣದ ಸರಳಿನಿ೦ದ ತಲೆಗೆ ಹೊಡೆದು ಕೊಲೆ ಮಾಡಿರುವ ಆರೋಪಿಯನ್ನು ಸುರತ್ಕಲ್ ಠಾಣಾ ಪೊಲೀಸರು ಬ೦ಧಿಸಿದ್ದಾರೆ.ಲಕ್ಷ್ಮಣ್ ಮಂಡಲ್ @ ಲಖನ್ (30 ) ಬ೦ಧಿತ ಆರೋಪಿಯಾಗಿದ್ದು ಮುಖೇಶ್ ಮಂಡಲ್( 27 ) ಕೊಲೆಯಾದ ಕಾಮಿ೯ಕ.

ದಿನಾಂಕ: 24-06-2025 ರಂದು ರಾತ್ರಿ 9 ಗಂಟೆ ಬಳಿಕ ಸುರತ್ಕಲ್ ಗ್ರಾಮದ ಮುಕ್ಕ ಲೇಔಟ್ ವೊ೦ದರಲ್ಲಿ ಕೆಲಸ ಮಾಡಿಕೊಂಡಿದ್ದ ಪಶ್ಚಿಮ ಬಂಗಾಳ ಪರಂಪುರ್, ರತುವಾದ ನಿವಾಸಿ ಮುಖೇಶ್ ಮಂಡಲ್ಎಂಬಾತನು ಕಾಣೆಯಾದ ಬಗ್ಗೆ ಆತನ ಜೊತೆಯಲ್ಲಿ ಕೆಲಸ ಮಾಡಿಕೊಂಡಿದ್ದ ಪಶ್ಚಿಮ ಬಂಗಾಳದ ನಿವಾಸಿ ದೀಪಾಂಕರ್ ಎಂಬವರು ನೀಡಿದ ದೂರಿನಂತೆ ದಿನಾಂಕ: 02.07.2025 ರಂದು ಸುರತ್ಕಲ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿತ್ತು..
ದಿನಾಂಕ: 21-08-2025 ರಂದು ಬೆಳಿಗ್ಗೆ 10 ಗಂಟೆಗೆ ಲೇಔಟ್ ನೊಳಗೆ ಮುಖೇಶ್ ಮಂಡಲ್ ನ ಮೃತ ದೇಹವು STP ಟ್ಯಾಂಕ್ ನೊಳಗೆ ಕೊಳೆತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿರುತ್ತದೆ. ಮೃತ ಮುಖೇಶ್ ಮಂಡಲ್ ನನ್ನು ಲಕ್ಷ್ಮಣ್ ಮಂಡಲ್ @ ಲಖನ್ ನು ಕೊಲೆ ಮಾಡಿ STP ಟ್ಯಾಂಕ್ ಗೆ ಹಾಕಿ, STP ಟ್ಯಾಂಕ್ ನ ಮುಚ್ಚಳವನ್ನು ಪ್ಲೈವುಡ್ ನ ಶೀಟ್ ನ್ನು ಹಾಕಿ ಮುಚ್ಚಿ ಕೊಲೆಯನ್ನು ಮರೆ ಮಾಚಿರುವ ಬಗ್ಗೆ ಚೇತನ್ ಎಂಬವರು ನೀಡಿದ ದೂರಿನಂತೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಕೊಲೆ ಮಾಡಿದ ಲಕ್ಷ್ಮಣ್ ಮಂಡಲ್ @ ಲಖನ್ ನ ಪತ್ತೆಗಾಗಿ ಸುರತ್ಕಲ್ ಠಾಣಾ ಪಿಎಸ್.ಐ ಶಶಿಧರ ಶೆಟ್ಟಿ ಹಾಗೂ ಎಎಸ್.ಐ ರಾಜೇಶ್ ಆಳ್ವಾ ಅವರ ತಂಡವನ್ನು ರಚಿಸಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ಕಳುಹಿಸಿಕೊಡಲಾಗಿತ್ತು.. ಪಿಎಸ್ಐ ಶಶಿಧರ ಶೆಟ್ಟಿ ರವರ ತಂಡ ಲಕ್ಷ್ಮಣ್ ಮಂಡಲ್ ನನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ ಸಮಯ 24.06.2025 ರಂದು ರಾತ್ರಿ 9 ಗಂಟೆಗೆ ಲೇಔಟ್ ನಲ್ಲಿ ನಿರ್ಮಾಣ ಹಂತದ ಕಟ್ಟಡದೊಳಗೆ ಲಕ್ಷ್ಮಣ್ ಮಂಡಲ್ ಹಾಗೂ ಮುಖೇಶ್ ಮಂಡಲ್ ಮದ್ಯಪಾನವನ್ನು ಮಾಡುತ್ತಿರುವ ಸಮಯ ಮುಖೇಶ್ ಮಂಡಲ್ ನು ಆರೋಪಿಯ ಪತ್ನಿಯ ಅಶ್ಲೀಲ ವೀಡಿಯೋ ಗಳನ್ನು ಸಂಗ್ರಹಿಸಿ ಮೊಬೈಲ್ ನಲ್ಲಿ ಇಟ್ಟು ತೋರಿಸಿದ್ದ. ಇದರಿ೦ದ ಕೋಪಗೊಂಡ ಆರೋಪಿ ಲಕ್ಷ್ಮಣ್ ಮಂಡಲ್ ಪಕ್ಕದ ರೂಮಿನಲ್ಲಿದ್ದ ಕಬ್ಬಿಣದ ಸರಳನ್ನು ತೆಗೆದುಕೊಂಡು ಮುಖೇಶ್ ಮಂಡಲ್ ನ ತಲೆಗೆ ಹೊಡೆದು ಕೊಲೆ ಮಾಡಿ ಕೊಲೆಯನ್ನು ಮರೆ ಮಾಚಲು ಮೃತ ಶರೀರವನ್ನು ಅಲ್ಲೆ ಇದ್ದ STP ಟ್ಯಾಂಕ್ ನೊಳಗೆ ಹಾಕಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 5 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿರುತ್ತದೆ.
ಆರೋಪಿ ಲಕ್ಷ್ಮಣ್ ಮಂಡಲ್ ಮೇಲೆ ಪಶ್ಚಿಮ ಬಂಗಾಳ ರಾಜ್ಯದ ರತುವಾ ಪೊಲೀಸ್ ಠಾಣೆಯಲ್ಲಿ 2 ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ.
ಆರೋಪಿಯ ಪತ್ತೆಯ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತರು (ಉತ್ತರ ಉಪ ವಿಭಾಗ) ಶ್ರೀಕಾಂತ್ ಕೆ .ಅವರ ಮಾರ್ಗದರ್ಶನದಲ್ಲಿ, ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ಪಿ ಅವರ ನೇತೃತ್ವದಲ್ಲಿ ಪಿಎಸ್ಐ ಗಳಾದ ರಘುನಾಯಕ, ರಾಘವೇಂದ್ರ ನಾಯ್ಕ್, ಜನಾರ್ಧನ ನಾಯ್ಕ್, ಶಶಿಧರ ಶೆಟ್ಟಿ, ಎಎಸ್.ಐ ರವರಾದ ರಾಜೇಶ್ ಆಳ್ವಾ, ತಾರನಾಥ, ಹಾಗೂ ಸಿಬ್ಬಂದಿಯವರಾದ ಅಣ್ಣಪ್ಪ, ಉಮೇಶ್ ಉಮೇಶ್ ಕುಮಾರ್, ರಾಜೇಂದ್ರ ಪ್ರಸಾದ್, ಕಾರ್ತೀಕ್, ಮೋಹನ್ ಮತ್ತು ನಾಗರಾಜ್ ರವರು ಆರೋಪಿ ಪತ್ತೆಯ ಬಗ್ಗೆ ಹಾಗೂ ತನಿಖೆಯ ಬಗ್ಗೆ ಭಾಗವಹಿಸಿರುತ್ತಾರೆ.


