ಇ೦ದು ವೆನ್ಲಾಕ್ ನಲ್ಲಿ ಸುಧಾರಿತ ಎಂಡೊ ಪ್ರೊಸ್ಥೆಟಿಕ್ ಸೆಂಟರ್ ಉದ್ಘಾಟನೆ
ಮಂಗಳೂರು:ಲಯನ್ಸ್ ಸಂಸ್ಥೆಯ ಕೃತಕ ಅಂಗಾಂಗ ಜೋಡಣ ಕೇಂದ್ರದ ವತಿಯಿಂದ ನಗರದ ವೆನ್ಲಾಕ್ ಆಸ್ಪತ್ರೆಯ ಲಿಂಬ್ ಸೆಂಟರ್‌ನಲ್ಲಿ ಮೇ 31ರಂದು ಸಂಜೆ 5ಕ್ಕೆ ಕೃತಕ ಅಂಗಾಂಗ ತಯಾರಿಯ ಸುಧಾರಿತ ಎಂಡೊ ಪ್ರೊಸ್ಥೆಟಿಕ್ ಸೆಂಟರ್ ಉದ್ಘಾಟನೆಗೊಳ್ಳಲಿದೆ. ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ|ಎಂ.ಬಿ. ಬೋರಲಿಂಗಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಲ್ಲಾ ಸರ್ಜನ್ ಡಾ| ಜೆಸಿಂತಾ ಡಿ'ಸೋಜಾ, ಲಯನ್ಸ್...
ವಿಕಲಚೇತನ ವಿದ್ಯಾರ್ಥಿಗಳಿಗೆ 6ನೇ ತರಗತಿ ಪ್ರವೇಶಕ್ಕೆ ಮೀಸಲಾತಿ
ಮಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾಗಾಂಧಿ/ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಶೇಕಡಾ 25% ಗಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ಮಕ್ಕಳು ಹಾಗೂ ಹೆಚ್‍ಐವಿ ರೋಗಕ್ಕೆ ತುತ್ತಾದ ಪೋಷಕರ ಮಕ್ಕಳು ಒಬ್ಬ...
ಎಂ.ಆರ್.ಜಿ.ಗ್ರೂಪ್- ಮ್ಯಾರಿಯೆಟ್ ಹೊಟೇಲ್ಸ್ ಸಹಯೋಗ: ನವಮಂಬಯಿಯಲ್ಲಿ ಹೊಸ ಹೋಟೆಲ್ ‘ಮ್ಯಾರಿಯಟ್ ನವಿ ಮುಂಬಯಿ’
ಬೆಂಗಳೂರು: ಆತಿಥ್ಯ ಕ್ಷೇತ್ರದಲ್ಲಿ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಸರಾಗಿರುವ ಎಂ.ಆರ್.ಜಿ.ಗ್ರೂಪ್ ಮತ್ತು ಮ್ಯಾರಿಯೆಟ್ ಹೊಟೇಲ್ಸ್ ಗಳು ನವ ಮುಂಬಯಿಯಲ್ಲಿ ಜಂಟಿಯಾಗಿ ಆತಿಥ್ಯೋದ್ಯಮಕ್ಕೆ ಶುಭಾರಂಭ ಮಾಡಿವೆ.
ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 26 ಕಿ.ಮೀ. ದೂರದಲ್ಲಿರುವ ನವ ಮುಂಬಯಿ ಮ್ಯಾರಿಯೆಟ್ ಹೊಟೇಲ್ ವ್ಯಾಪಾರೋದ್ಯಮಿ ಪ್ರವಾಸಿಗರು ಮತ್ತು ರಜೆ ಸಮಯ ಕಳೆಯುವ ಪ್ರವಾಸಿಗರಿಗೆ ಅನುಕೂಲಕರ...
ಮೇ 31: ಶಾಮ್ ಇನ್ಸ್ಟಿಟ್ಯೂಟ್ ಉದ್ಘಾಟನೆ
ಶಾಮಲಾ ಶಿಕ್ಷಣ ಟ್ರಸ್ಟ್ ನ ಶಾಮ್ ಇನ್ಸ್ಟಿಟ್ಯೂಟ್ ಮೇ 31 ರ೦ದು ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ.
ಬೆಳಗ್ಗ 9 ರಿಂದ ನಡೆಯುವ ಉದ್ಘಾಟನಾ ಸಮಾರ೦ಭದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಫರೀದ್,ಶಾಸಕರಾದ ಡಿ ವೇದವ್ಯಾಸ್ ಕಾಮತ್ , ಡಾ. ಭರತ್ ಶೆಟ್ಟಿ , ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು , ಕಾರ್ಪೊರೇಟರ್ ಕಾವ್ಯ ನಟರಾಜ್ ಆಳ್ವ...
ಪ್ರೆಸ್ ಕ್ಲಬ್ ಸಮಾಚಾರ‘ ಇ-ಪೇಪರ್ ದ್ವಿತೀಯ ಸಂಚಿಕೆ ಅನಾವರಣ
ಮಂಗಳೂರು : ಪತ್ರಕರ್ತರು ತಮ್ಮ ಸೃಜನಶೀಲ ಬರಹಗಳನ್ನು ಪತ್ರಿಕೆಗಳಲ್ಲಿ ಪ್ರಕಟಗೊಳಿಸುವುದಕ್ಕೆ ಮಾತ್ರ ಸೀಮಿತಗೊಳಿಸದೆ ಅವುಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಹೊರತಂದರೆ ಶಾಶ್ವತ ದಾಖಲೆಯಾಗಿ ಉಳಿಯುತ್ತದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದರು.ಮಂಗಳೂರು ಪ್ರೆಸ್ ಕ್ಲಬ್‌ನ ಗೃಹ ಪತ್ರಿಕೆ ‘ಮಂಗಳೂರು ಪ್ರೆಸ್ ಕ್ಲಬ್ ಸಮಾಚಾರ‘ ಇ-ಪೇಪರ್ ಇದರ ದ್ವಿತೀಯ...
ನರ್ಸರಿಗಳಲ್ಲಿ ಕಸಿ ಸಸಿಗಳು ಲಭ್ಯ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಕಸಿ ಕಾಳುಮೆಣಸು, ಕಸಿ ಗೇರು, ದ್ವಿಕಾಂಡ ಕಾಳುಮೆಣಸು, ಕೊಕ್ಕೋ, ಅಡಿಕೆ, ಪಪ್ಪಾಯಿ, ನುಗ್ಗೆ, ಮಲ್ಲಿಗೆ, ಕಸಿ ಮಾವು, ಇತರೆ ಸಸಿಗಳು ಇಲಾಖಾ ದರದಂತೆ ಮಾರಾಟಕ್ಕೆ ಲಭ್ಯವಿರುತ್ತದೆ.
ಕಸಿ ಸಸಿಗಳಿಗಾಗಿ ಮಂಗಳೂರಿನ ಪಡೀಲು ಜಿಲ್ಲಾ ನರ್ಸರಿ ಮೊಬೈಲ್ ಸಂ:9972057821, ಬಂಟ್ವಾಳ ಹಾಗೂ ತುಂಬೆ ನರ್ಸರಿ ಮೊಬೈಲ್ ಸಂ:...
ಅರೆಕಾಲಿಕ ಕೋರ್ಸ್‍ಳಿಗೆ ಅರ್ಜಿ ಆಹ್ವಾನ
ಮಂಗಳೂರು: ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‍ನಲ್ಲಿ ಅರೆಕಾಲಿಕ ಪ್ರಥಮ ಸೆಮಿಸ್ಟರ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕೋರ್ಸ್‍ಗಳಿಗೆ 2024-25ನೇ ಸಾಲಿನ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸಂಬಂಧಪಟ್ಟ ವಿಷಯದಲ್ಲಿ ಎರಡು ವರ್ಷಗಳ ತಾಂತ್ರಿಕ ಸೇವಾನುಭಾವ ಪಡೆದು ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಕಾರ್ಖಾನೆ, ಕೈಗಾರಿಕಾ ಸಂಸ್ಥೆಗಳಲ್ಲಿ ಖಾಯಂ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ...
ದೈಹಿಕ ಕ್ಷಮತೆ ಹೆಚ್ಚಿಸಲು ಕ್ರೀಡೆ ಸಹಕಾರಿ : ಕಿಶೋರ್ ಕುಮಾರ್
ಮಂಗಳೂರು, ಮೇ ೨೯: ದೈಹಿಕ ಕ್ಷಮತೆ ಆಧುನಿಕ ಜೀವನ ಶೈಲಿಯಲ್ಲಿ ಅತ್ಯಂತ ಪ್ರಮುಖ ವಸ್ತುವಾಗಿದೆ. ಅದನ್ನು ಬೇರೆಲ್ಲೂ ಪಡೆಯಲು ಸಾಧ್ಯವಿಲ್ಲ. ಬದಲಾಗಿ ದೈಹಿಕ ಕ್ಷಮತೆಯನ್ನು ಕಾಪಾಡಿಕೊಂಡು ನಿರಂತರತೆಗಾಗಿ ಪ್ರತಿದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಲಹೆ ನೀಡಿದರು.ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ...
ಶಾಲಾ ಕಾಲೇಜುಗಳ ಆಡಳಿತ ವರ್ಗ ಹಾಗೂ ಶಾಲಾ ವಾಹನಗಳ ಚಾಲಕರ ಸಭೆ
ಮಂಗಳೂರು : ಜೂನ್ ತಿಂಗಳ ಮೊದಲನೇ ವಾರದಲ್ಲಿ ಶಾಲಾ ಕಾಲೇಜುಗಳು ಪ್ರಾರಂಭವಾಗಲಿದ್ದು, ಈ ಕುರಿತು ನಗರದ ಎಲ್ಲಾ ಶಾಲಾ ಕಾಲೇಜುಗಳ ಆಡಳಿತ ವರ್ಗ ಹಾಗೂ ಶಾಲಾ ವಾಹನಗಳ ಚಾಲಕರುಗಳ ಸಭೆಯನ್ನು ಪೊಲೀಸ್ ಆಯುಕ್ತ ಅನುಪಮ್ ಆಗ್ರವಾಲ್ ಅವರ ಅಧ್ಯಕ್ಷತೆಯಲ್ಲಿ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆಸಲಾಯಿತು.ಸಭೆಯಲ್ಲಿ ಶಾಲಾ ವಾಹನಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ಮೋಟಾರು ವಾಹನಗಳು(ಶಾಲಾ...
ಸಂಚಾರಿ ಉಲ್ಲಂಘನೆ ನ್ಯಾಯ ಸಂಹಿತೆಯಲ್ಲಿ ಬದಲಾವಣೆ, ಇನ್ಮುಂದೆ ಶಿಕ್ಷೆಯ ಪ್ರಮಾಣ ಹೆಚ್ಚಾಗಲಿದೆ :ಡಿಸಿಪಿ ಬಿ.ಪಿ. ದಿನೇಶ್ ಕುಮಾರ್
ಮಂಗಳೂರು : ಬಸ್ಸೆಂದರೆ ವಾಹನಗಳಲ್ಲಿ ದೊಡ್ಡಣ್ಣ, ಹಾಗಾಗಿ ಸಣ್ಣ ವಾಹನಗಳಿಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಿರಿ. ನ್ಯಾಯಸಂಹಿತೆಯಲ್ಲಿ ಮುಂದಿನ ತಿಂಗಳಿನಿಂದ ಬದಲಾವಣೆಗಳು ಆಗಲಿದೆ. ಸಂಚಾರ ನಿಯಮ ಉಲ್ಲಂಘನೆಗಳ ಶಿಕ್ಷೆಯ ಪ್ರಮಾಣ ಮತ್ತು ದಂಡದ ಪ್ರಮಾಣ ಹೆಚ್ಚಾಗಲಿದೆ ಎಂದು ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಬಿ.ಪಿ. ದಿನೇಶ್ ಕುಮಾರ್ಹೇಳಿದರು.
ದ.ಕ ಬಸ್...






