ಕೆನರಾ ಶಿಕ್ಷಣ ಸಂಸ್ಥೆಗಳ ಬಗ್ಗೆ ಕೇರಳ ರಾಜ್ಯಪಾಲ ಆರಿಫ್ ಖಾನ್ ಮೆಚ್ಚುಗೆ
ಮ೦ಗಳೂರು: ಸ್ವಾತಂತ್ರ್ಯಪೂರ್ವದಲ್ಲಿ ಸ್ಥಾಪಿತವಾದ ಕೆನರಾ ಶಿಕ್ಷಣ ಸಂಸ್ಥೆ, 133 ವರ್ಷಗಳ ಇತಿಹಾಸದಲ್ಲಿ ಶಿಕ್ಷಣಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ್ದು, ಲಕ್ಷಾಂತರ ನಾಗರಿಕರ ಉಜ್ವಲ ಬದುಕಿಗೆ ಕಾರಣೀಕರ್ತರಾಗಿರುವ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಕೊಡುಗೆ ಸ್ಮರಣೀಯವಾದದು ಎಂದು ಕೇರಳ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಅಭಿಪ್ರಾಯಪಟ್ಟರು.ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ವಾಸುದೇವ್ ಕಾಮತ್ ಹಾಗೂ ಆಡಳಿತ...
ಕಾವೂರಿನ “ಶ್ರೀ ಹಿಲ್ ಸೈಡ್”ಗೆ ಕಿಚ್ಚ ಸುದೀಪ ಭೇಟಿ
ಮಂಗಳೂರು: ಕಾವೂರು -ಬೊಂದೇಲ್ ಮುಖ್ಯ ರಸ್ತೆಯ ಮೆಸ್ಕಾಂ ಕಚೇರಿಯ ಹಿಂಬದಿ ಇತ್ತೀಚೆಗೆ ಉದ್ಘಾಟನೆಗೊಂಡ ಗಿರೀಶ್ ಎಂ. ಶೆಟ್ಟಿ ಕಟೀಲು ಮಾಲಕತ್ವದ "ಶ್ರೀ ಹಿಲ್ ಸೈಡ್" ವಸತಿ ಸಂಕೀರ್ಣಕ್ಕೆ ಖ್ಯಾತ ಚಲನಚಿತ್ರ ನಟ ಸುದೀಪ್ ಅವರು ರವಿವಾರ ಮಧ್ಯಾಹ್ನ ಭೇಟಿ ನೀಡಿದರು. ಸುಮಾರು ಎರಡು ಗಂಟೆಗಳ ಕಾಲ ಹಿಲ್ ಸೈಡ್ ಸಂಕೀರ್ಣದಲ್ಲಿ ವಿಶ್ರಾಂತಿ ಪಡೆದು, ವಸತಿ...
ಪಾಲಿಕೆ ವ್ಯಾಪ್ತಿಯೊಳಗೆ ಭೂ ಅಗೆತ ನಿಷೇಧ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜೂನ್ 1 ರಿಂದ ಸೆಪ್ಟೆಂಬರ್ ವರೆಗೆ ತಿಂಗಳೊಳಗೆ ಭೂ ಅಗೆತ ನಿಷೇಧಿಸಲಾಗಿದೆ.ಪಾಲಿಕೆ ವ್ಯಾಪ್ತಿಯಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಅತ್ಯಧಿಕ ಮಳೆ ಆಗುವ ಸಾಧ್ಯತೆ ಇರುವುದರಿಂದ ಕಟ್ಟಡಗಳ ಮೂಲಕ ಯಾವುದೇ ರೀತಿಯ ದುರಂತ ಅಥವಾ ಪ್ರಾಣಪಾಯ ಸಂಭವಿಸಿದಲ್ಲಿ ಕಟ್ಟಡದ ಮಾಲೀಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಶಿಥಿಲಗೊಂಡು ಬೀಳುವ...
ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ನಗರದ ಬೊಂದೇಲ್ ನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಗೆ 2024-2025ನೇ ಸಾಲಿಗೆ ಡಿಪ್ಲೋಮಾ ನಾಲ್ಕನೇ ಹಂತದ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಕಮರ್ಷಿಯಲ್ ಪ್ರಾಕ್ಟೀಸ್ (ಇಂಗ್ಲೀಷ್ ಮತ್ತು ಕನ್ನಡ) ಹಾಗೂ ಲೈಬ್ರೆರಿ ಅಂಡ್...
ಯಕ್ಷಧ್ರುವ ಪಟ್ಲ ಸಂಭ್ರಮದ ಸಮಾರೋಪ
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ.) ಇದರ ವತಿಯಿಂದ ಜರುಗಿದ ಯಕ್ಷಧ್ರುವ ಪಟ್ಲ ಸಂಭ್ರಮದ ಸಮಾರೋಪ ಸಮಾರಂಭ ಆದಿತ್ಯವಾರ ಸಂಜೆ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಿತು.
ಹಿರಿಯ ಯಕ್ಷಗಾನ ಕಲಾವಿದ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರಿಗೆ 2024ರ ಯಕ್ಷಧ್ರುವ ಪಟ್ಲ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ಅವರು, "ಕಲಾವಿದನಾದವ ಪ್ರಶಸ್ತಿಗಾಗಿ ಫೈಲ್ ಹಿಡಿದುಕೊಂಡು...
ಸಂಪತ್ತನ್ನು ಕೂಡಿಡುವ ಬದಲು ಹಂಚಿದರೆ ದುಪ್ಪಟ್ಟಾಗುತ್ತದೆ: ಕನ್ಯಾಡಿ ಶ್ರೀ
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ.) ಇದರ ವತಿಯಿಂದ ಯಕ್ಷಧ್ರುವ ಪಟ್ಲ ಸಂಭ್ರಮದ ಸಭಾ ಕಾರ್ಯಕ್ರಮ ಆದಿತ್ಯವಾರ ಮಧ್ಯಾಹ್ನ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಿತು.
ಆಶೀರ್ವಚನಗೈದ ಕನ್ಯಾಡಿ ಶ್ರೀ ರಾಮ ಮಹಾಸಂಸ್ಥಾನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು, "ನಮ್ಮಲ್ಲಿರುವ ಸಂಪತ್ತನ್ನು ಕೂಡಿಡುವ ಬದಲು ಯೋಗ್ಯರಿಗೆ ಹಂಚಿದರೆ ಅದು ದುಪ್ಪಟ್ಟಾಗುತ್ತದೆ. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು...
ಅಶಕ್ತ ಯಕ್ಷ ಕಲಾವಿದರಿಗೆ ಪಟ್ಲ ಫೌಂಡೇಶನ್ ಸಾರ್ಥಕ ಸೇವೆ”:ಕನ್ಯಾನ ಸದಾಶಿವ ಶೆಟ್ಟಿ
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ.) ಇದರ ವತಿಯಿಂದ ಯಕ್ಷಧ್ರುವ ಪಟ್ಲ ಸಂಭ್ರಮದ ಉದ್ಘಾಟನಾ ಸಮಾರಂಭ ಆದಿತ್ಯವಾರ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಿತು.ಉದ್ಘಾಟನೆ ನೆರವೇರಿಸಿ ಮಾತಾಡಿದ ಹೇರಂಭ ಕೆಮಿಕಲ್ಸ್ ಇಂಡಸ್ಟ್ರಿಸ್ ಮುಂಬೈ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು, "ಯಕ್ಷಗಾನ ನಮ್ಮ ತುಳುನಾಡಿನ ಅನನ್ಯ ಪರಂಪರೆ. ಹಿಂದೆ ಅದೆಷ್ಟೋ ಹೆಸರು...
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಿಎ೦, ಡಿಸಿಎ೦ ಭೇಟಿ
ಬೆಳ್ತಂಗಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದರು. ಕ್ಷೇತ್ರದ ವತಿಯಿಂದ ಮುಖ್ಯಮಂತ್ರಿಯವರನ್ನು ಡಿ.ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಭವ್ಯ ಮೆರವಣಿಗೆಯೊಂದಿಗೆ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಜತೆಗೆ ಸಚಿವರಾದ...
ವಾರ್ಷಿಕೋತ್ಸವ ಕಾಲೇಜಿನ ವರ್ಷದ ಉತ್ಸವ: ಪ್ರೊ. ಸಂಗಪ್ಪ ವೈ.
ಮಂಗಳೂರು: ವಾರ್ಷಿಕೋತ್ಸವ ಕಾಲೇಜಿನ ಸಂಪ್ರದಾಯ ಮತ್ತು ಸಡಗರ. ಹಾಗಾಗಿಯೇ ಇದನ್ನು ಉತ್ಸವದರೀತಿಯಲ್ಲಿ ಆಚರಿಸಲಾಗುತ್ತದೆ. ಇಂದಿನ ಕಾಲದಲ್ಲಿ ಬಹುತೇಕ ವಿದ್ಯಾರ್ಥಿಗಳು ಒತ್ತಡದಿಂದ ಬಳಲುತ್ತಿರುವುದುವಿಪರ್ಯಾಸ. ಒತ್ತಡ ನಿವಾರಿಸುವ ಕೆಲಸವನ್ನು ವಾರ್ಷಿಕೋತ್ಸವ ಮಾಡುತ್ತದೆ ಎಂದು ಮಂಗಳೂರುವಿಶ್ವವಿದ್ಯಾನಿಲಯ ಹಣಕಾಸು ಅಧಿಕಾರಿ ಪ್ರೊ. ಸಂಗಪ್ಪ ವೈ. ಹೇಳಿದರು.ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ 119ನೇ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.ಸಾಮಾನ್ಯವಾಗಿ...
ಮೇ 29 ರಂದು ಕಾರವಾರ ಕ್ರೀಡಾ ವಸತಿ ನಿಲಯದ ಆಯ್ಕೆ ಪ್ರಕ್ರಿಯೆ
ಮಂಗಳೂರು:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕಾರವಾರ ಕ್ರೀಡಾ ವಸತಿ ನಿಲಯಕ್ಕೆ 2024-25 ನೇ ಸಾಲಿನ ಸೇಲಿಂಗ್ ಕಯಾಕಿಂಗ್ ಮತ್ತು ಕೆನೋಯಿಂಗ್ ವಿಭಾಗಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಮೇ. 29 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಮಂಗಳ ಕ್ರೀಡಾಂಗಣದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
4ನೇ ಮತ್ತು 7ನೇ ತರಗತಿಯಲ್ಲಿ ತೇರ್ಗಡೆಯಾದ ಹಾಗೂ ಕ್ರಮವಾಗಿ ಪ್ರಸ್ತುತ...







