ನ.19ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಾಖಲೆಯ 7399 ಪ್ರಯಾಣಿಕರು
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ 19ರಂದು 26 ಆಗಮನ ಮತ್ತು 25 ನಿರ್ಗಮನ ವಿಮಾನಗಳಲ್ಲಿ 7399 ಪ್ರಯಾಣಿಕರು ಪ್ರಯಾಣಿಸಿ ದಾಖಲೆ ನಿರ್ಮಿಸಿದ್ದಾರೆ. ಇದರಲ್ಲಿ ಕ್ರಮವಾಗಿ 3527 ಆಗಮಿಸುವ ಮತ್ತು 3872ನಿರ್ಗಮಿಸುವ ಪ್ರಯಾಣಿಕರು ಸೇರಿದ್ದಾರೆ. ಇದು ಅಕ್ಟೋಬರ್ 31, 2020 ರ ವಾಣಿಜ್ಯ ಕಾರ್ಯಾಚರಣೆ ದಿನಾಂಕದಿಂದ (ಸಿಒಡಿ) ವಿಮಾನನಿಲ್ದಾಣವು ನಿರ್ವಹಿಸಿದ ಅತಿ ಹೆಚ್ಚು...
ಮಂಗಳೂರು-ತಾಳಿಕೋಟೆ ಕೆಎಸ್‍ಆರ್‍ಟಿಸಿ ಪಲ್ಲಕ್ಕಿ ಸ್ಲೀಪರ್ ಬಸ್
ಮಂಗಳೂರು:- ಕರಾ.ರ.ಸಾ. ಸಂಸ್ಥೆಯು ಮಂಗಳೂರಿನಿಂದ ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಹೊನ್ನಾವರ ಕುಮಟಾ, ಅಂಕೋಲಾ, ಹುಬ್ಬಳ್ಳಿ, ಬಾಗಲಕೋಟೆ, ನಿಡಗುಂದಿ, ಮುದ್ದೇಬಿಹಾಳ ಮಾರ್ಗವಾಗಿ ತಾಳಿಕೋಟೆಗೆ ಹೊಸ ನಾನ್ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್ ಸಂಚಾರವನ್ನು ನವೆಂಬರ್ 18 ರಿಂದ ಪ್ರಾರಂಭಿಸಿದೆ.ಈ ಬಸ್ ಮಂಗಳೂರು ಬಸ್ಸು ನಿಲ್ದಾಣದಿಂದ ಸಂಜೆ 6.30 ಗಂಟೆಗೆ ಹೊರಟು ಉಡುಪಿ 7.45ಕ್ಕೆ, ಕುಂದಾಪುರ...
ಮಂಗಳೂರು ವಿವಿ: ಪಿ.ಹೆಚ್.ಡಿ ಸೀಟುಗಳಿಗೆ ಅರ್ಜಿ ಆಹ್ವಾನ
ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ವಿಭಾಗಗಳು, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು, ಹಾಗೂ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರಗಳಲ್ಲಿ ಪಿ.ಹೆಚ್.ಡಿ ಕಾರ್ಯಕ್ರಮಕ್ಕೆ ಖಾಲಿ ಇರುವ ಸೀಟುಗಳಿಗೆ ನೋಂದಾಯಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಭರ್ತಿ ಮಾಡಿದ ಅರ್ಜಿಯನ್ನು ವಿವರವಾದ ಅಧಿಸೂಚನೆಯೊಂದಿಗೆ ಕುಲಸಚಿವರು, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ-574199 ಅಥವಾ ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟ ಇವರಿಂದ ರೂ. 1,100 ನ್ನು...
ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕರ ದಿನದ ಆಚರಣೆ
ಮಂಗಳೂರು:ಮಂಗಳೂರಿನ ಪ್ರತಿಷ್ಠಿತ ಕೆನರಾ ಸಮೂಹ ಶಿಕ್ಷಣ ಸಂಸ್ಥೆ ಉದಾತ್ತ ದೃಷ್ಟಿಕೋನವನ್ನು ಇಟ್ಟುಕೊಂಡು ಶೈಕ್ಷಣಿಕವಾಗಿ ಗಟ್ಟಿತನ ಹಾಗೂ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ರೋಮಾಂಚಕ ಕಲಿಕಾ ಅನುಭವ ಗಳನ್ನು ನೀಡುತ್ತಾ ಬಂದಿದೆ. 1891ರಲ್ಲಿ ಶ್ರೇಷ್ಠ ಮಾನವತವಾದಿ ಹಾಗೂ ಸಂಸ್ಥೆಯ ಪ್ರವರ್ತಕರಾದ ಅಮ್ಮೆಂಬಳ ಸುಬ್ಬರಾವ್ ಪೈ ಅವರ ದೂರದೃಷ್ಟಿಯಿಂದ ಕೆನರಾ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಕೆನರಾ ಬ್ಯಾಂಕ್ ಮತ್ತು...
ಇಂದಿರಾ ಗಾಂಧಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣಕತ೯ರು :ಬಿ.ರಮಾನಾಥ ರೈ
ಮಂಗಳೂರು: ಇಂದಿರಾ ಗಾಂಧಿ ಅವರು ಬ್ಯಾಂಕುಗಳ ರಾಷ್ಟ್ರೀಕರಣ, ಭೂ ಮಸೂದೆ ಕಾಯ್ದೆ ಹಾಗೂ ಹಲವಾರು ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತಂದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ರವಿವಾರ ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ...
ಹೋಟೇಲ್ ವುಡ್‌ಲ್ಯಾಂಡ್ಸ್‌ನಲ್ಲಿ ರಾಜಸ್ಥಾನಿ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳ ಆರಂಭ
ಮಂಗಳೂರು : ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್ ರವರ ಸಂಯೋಜನೆಯಲ್ಲಿ ರಾಜಸ್ಥಾನ ಆರ್ಟ್ ಹಾಗೂ ಕ್ರಾಫ್ಟ್ ವಿವಿಧ ಕರಕುಶಲ ವಸ್ತುಗಳ ಹಾಗೂ ಕೈಮಗ್ಗ ಸೀರೆಗಳ ಹಾಗೂ ಅಭರಣಗಳು ಮತ್ತು ಕಲಾಕೃತಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ "ರಾಜಸ್ಥಾನಿ ಬೃಹತ್ ಮಾರಾಟ ಮೇಳ" ಶನಿವಾರದಂದು ನಗರದ ಬಂಟ್ಸ್ ಹಾಸ್ಟೇಲ್ ರಸ್ತೆಯ ಹೋಟೇಲ್ ವುಡ್‌ಲ್ಯಾಂಡ್ಸ್ ನಲ್ಲಿ...
ಪ.ಜಾತಿ/ಪ.ಪಂಗಡದ ಫಲಾನುಭವಿಗಳಿಗೆ ಮಿಶ್ರತಳಿ ಹಸುಗಳ ವಿತರಣೆ
ಮಂಗಳೂರು: 2023-24ನೇ ಸಾಲಿನ “ಹಾಲು ಉತ್ಪಾದಕರಿಗೆ ಉತ್ತೇಜನ” ಕಾರ್ಯಕ್ರಮದ ಉಳಿಕೆ ಅನುದಾನದಲ್ಲಿ ಪ.ಜಾತಿ ಮತ್ತು ಪ.ಪಂಗಡದ ಫಲಾನುಭವಿಗಳಿಗೆ ಒಂದು ಮಿಶ್ರತಳಿ ಹಸುವನ್ನು ವಿತರಿಸುವ ಕಾರ್ಯಕ್ರಮವಿರುತ್ತದೆ.
ಘಟಕ ವೆಚ್ಚ ರೂ. 65000 ಗಳಾಗಿದ್ದು, ಶೇಕಡಾ 90 ಸಹಾಯಧನದ ಸೌಲಭ್ಯವಿರುತ್ತದೆ. ಆಸಕ್ತರು ಸ್ಥಳೀಯ ಪಶುವೈದ್ಯರನ್ನು ಸಂಪರ್ಕಿಸಿ, ನವೆಂಬರ್ 25ರೊಳಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ...
ಮೋಟಾರು ಸೈಕಲ್ ಅಪಘಾತ:ಸವಾರ ಸಾವು
ಕಡಬ: ಮೋಟಾರು ಸೈಕಲ್ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಕಡಬ ತಾಲೂಕು ಕೋಣಾಲು ಗ್ರಾಮದ ಕೋಲ್ಪೆಯಲ್ಲಿ ಸ೦ಭವಿಸಿದೆ. ಸವಾರ ದೀಕ್ಷಿತ್ ಮೃತಪಟ್ಟವರು.ನ.16ರಂದು ಮದ್ಯಾಹ್ನ ಮೋಟಾರು ಸೈಕಲ್ ಸವಾರ ದೀಕ್ಷಿತ್ ಅವರು, ಕಡಬ ತಾಲೂಕು ಕೋಣಾಲು ಗ್ರಾಮದ ಕೋಲ್ಪೆಯಲ್ಲಿ ಸಾಗುತ್ತಿದ್ದಾಗ ಹತೋಟಿ ತಪ್ಪಿ ಸ್ಕಿಡ್ಡಾಗಿ ಬಿದ್ದು,ಲಾರಿಯ ಮುಂಭಾಗ ಕೆಳಭಾಗಕ್ಕೆ ನುಗ್ಗಿ ಗಂಭೀರ ಗಾಯಗಳಾಗಿವೆ. ಅವರನ್ನು ಆಂಬಲೆನ್ಸಿನಲ್ಲಿ...
ಮಾದಕ ವ್ಯಸನ ಜಾಗತಿಕ ಸವಾಲುಗಳಲ್ಲಿ ಒಂದು: ದಿನೇಶ್ ಕುಮಾರ್
ಮಂಗಳೂರು: ಮಾದಕ ವ್ಯಸನದ ಜಾಲ ವ್ಯವಸ್ಥಿತವಾಗಿ ದೇಶದಾದ್ಯಂತ ಹರಡಿಕೊಂಡಿದೆ. ಯುವ ಜನತೆ ಮೋಜು ಮಸ್ತಿಗಾಗಿ ಆರಂಭಿಸುವ ಮಾದಕ ಪದಾರ್ಥಗಳ ಸೇವನೆ ನಂತರ ವ್ಯವಸ್ಥಿತರೀತಿಯಲ್ಲಿ ವ್ಯಸನವಾಗಿ ಬದಲಾಗುತ್ತದೆ. ಹಾಗಾಗಿ ಮಾದಕ ವ್ಯಸನ ಜಾಗತಿಕ ಸವಾಲುಗಳಲ್ಲಿ ಒಂದಾಗಿದೆ ಎಂದು ದ. ಕ. ಜಿಲ್ಲಾ ಉಪಪೊಲೀಸ್ ಆಯುಕ್ತ ಬಿ. ಪಿ. ದಿನೇಶ್ ಕುಮಾರ್ ಆತಂಕವ್ಯಕ್ತಪಡಿಸಿದರು.ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ...
ಗ್ಲೋಬಲ್ ಅಕಾಡೆಮಿ”ಯಲ್ಲಿ ಗ್ಲೋಬಲ್ ಸ್ಪೋಕನ್ ಇಂಗ್ಲೀಷ್ ಕೋರ್ಸ್ ಪ್ರಾರಂಭ
ಮಂಗಳೂರು: ನಗರದ ಬೆಂದೂರ್ ವೆಲ್ ನಲ್ಲಿರುವ ಗ್ಲೋಬಲ್ ಅಕಾಡೆಮಿಯಲ್ಲಿ ಗ್ಲೋಬಲ್ ಸ್ಪೋಕನ್ ಇಂಗ್ಲೀಷ್ ಕೋರ್ಸ್ ಅನ್ನು ಪ್ರಾರಂಭಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕಿ ರಮ್ಯಾ ಆರ್. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು."ಸಂಸ್ಥೆಯ ಟ್ರೈನರ್ಸ್ ಹಾಗೂ ಡೆವಲಪರ್ಸ್ ಗಳ ವರುಷಗಳ ಪ್ರಯತ್ನದ ನಂತರ ಆನ್ ಲೈನ್ ಕೋರ್ಸ್ ಅನ್ನು ಪ್ರಸ್ತುತ ಪಡಿಸಿದ್ದೇವೆ. ಒಟ್ಟು 17 ಹಂತಗಳ ಈ ಕೋರ್ಸ್...







