ದೇಶ ವಿದೇಶಗಳಲ್ಲಿ ಬಂಟರ ಕೊಡುಗೆ ಅನನ್ಯ: ಕೆ ಪ್ರಕಾಶ್ ಶೆಟ್ಟಿ

ಮಂಗಳೂರು: ದೇಶ ವಿದೇಶಗಳಲ್ಲಿ ಬಂಟರ ಕೊಡುಗೆ ಅನನ್ಯವಾಗಿದೆ. ಕೃಷಿ ಪರಂಪರೆಯಿಂದ ಬಂದ ಬಂಟ ಸಮುದಾಯ ಪವಿತ್ರವಾದ ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಈ ನಿಟ್ಟಿನಲ್ಲಿ ಬಂಟ್ವಾಳ ಬಂಟರ ಸಂಘ ಯುವ ವಿಭಾಗದ ಅಧ್ಯಕ್ಷ ನಿಶಾನ್ ಆಳ್ವ ಇವರ ನೇತೃತ್ವದಲ್ಲಿ ದೀಪಾವಳಿ ಹಬ್ಬವನ್ನು ಉತ್ತಮವಾಗಿ ನಡೆಸಿದ್ದಾರೆ ಎಂದು ಎಂಆರ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ...

ನೆಹರೂ ಮೈದಾನ: ಚೂರಿ ಇರಿತ

0
ಮಂಗಳೂರು: ವ್ಯಕ್ತಿಗೆ ಮೂವರು ಚೂರಿಯಿ೦ದ ಇರಿದು ಗ೦ಭೀರ ಗಾಯಗೊಳಿಸಿದ ಘಟನೆ ನಗರದ ನೆಹರೂ ಮೈದಾನ್‌ ನ ಪುಟ್ಟಾಲ್ ಗ್ರೌಂಡ್ ನಲ್ಲಿ ಸೋಮವಾರ ನಡೆದಿದೆ. ಗುನ್ನು ಚೌದರಿ ಎಂಬಾತ ಗಾಯಗೊ೦ಡ ವ್ಯಕ್ತಿ.ಗುನ್ನು ಚೌದರಿ ಸೋಮವಾರ ಮಧ್ಯಾಹ್ನ ಸುಮಾರು 1-30 ಗಂಟೆಗೆ ಪುಟ್ಟಾಲ್ ಗ್ರೌಂಡ್ ನ ಪುಟ್ ಪಾತ್ ಮೇಲೆ ಕುಳಿತುಕೊಂಡಿದ್ದ. ಆ ವೇಳೆ ಅಲ್ಲಿಗೆ ಬಂದ...

ಜನವರಿ 24 ರಿಂದ ದ್ವಿತೀಯ ವರ್ಷದ “ಸ್ಟ್ರೀಟ್ ಫುಡ್ ಫಿಯೆಸ್ಟ”

ಮ೦ಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ಈ ಬಾರಿಯ ದ್ವಿತೀಯ ವರ್ಷದ "ಸ್ಟ್ರೀಟ್ ಫುಡ್ ಫಿಯೆಸ್ಟ"ವು 2024 ರ ಜನವರಿ 24 ರಿಂದ ಐದು ದಿನಗಳ ಕಾಲ ನಡೆಯಲಿದೆ.ಸ್ಟ್ರೀಟ್ ಫುಡ್ ಫಿಯೆಸ್ಟಾದ ಲಾಂಛನವನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ತಯಾರಿಸಲಾಗಿದ್ದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮ೦ಗಳವಾರ ಬಿಡುಗಡೆಗೊಳಿಸಿದರು. ಈ ಉತ್ಸವವು "ಕರಾವಳಿ ವಸ್ತು ಪ್ರದರ್ಶನ ಮೈದಾನದಿಂದ...

ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನಾಚರಣೆ

0
ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ದೇಶದ ಮೊದಲ ಪ್ರಧಾನಿ‡ ಭಾರತ ರತ್ನ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನಾಚರಣೆ ಮಂಗಳವಾರ ನಗರದ ನೆಹರೂ ಮೈದಾನದಲ್ಲಿ ನಡೆಯಿತು.ನೆಹರೂ ಪ್ರತಿಮೆಗೆ ಪುಷ್ಪಾರ್ಚನೆಗೈದು ಮಾತನಾಡಿದ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ನೆಹರೂ ಅವರು ಸ್ವಾತಂತ್ರ್ಯದ ನಂತರ ಭವ್ಯ ಭಾರತದ ಭವಿಷ್ಯಕ್ಕೆ ಸುಭದ್ರ ಅಡಿಪಾಯ ಹಾಕಿದರು.ಆರ್ಥಿಕ,...

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗೋಪೂಜೆ,ಲಕ್ಷ್ಮೀ ಪೂಜೆ

ಮಂಗಳೂರು: ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ಗೋ ಪೂಜೆ,ಲಕ್ಷ್ಮೀ ಪೂಜೆ ಜರಗಿತು.ಬಿಜೆಪಿ ಕಚೇರಿ ಮುಂಭಾಗದಲ್ಲಿ ಗೋವಿಗೆ ಪೂಜೆ ನಡೆಯಿತು. ಗೋವಿಗೆ ಹಾರಾರ್ಪಣೆಗೈದು, ತಿಲಕವಿಟ್ಟು ,ಆರತಿ ಬೆಳಗಿ ಪೂಜೆ ನೆರವೇರಿಸಿ ಗೋಗ್ರಾಸ ನೀಡಲಾಯಿತು.ಬಳಿಕ ಬಿಜೆಪಿ ಕಚೇರಿಯಲ್ಲಿ ಲಕ್ಷ್ಮೀ ಪೂಜೆ ನೆರವೇರಿತು. ಪೂಜೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ...

ಭಾರತ ಸೇವಾದಳ ವತಿಯಿಂದ ನೆಹರೂ ಜನ್ಮದಿನಾಚರಣೆ ಹಾಗೂ ಮಕ್ಕಳ ದಿನಾಚರಣೆ

0
ಮಂಗಳೂರು: ಭಾರತ ಸೇವಾದಳ ವತಿಯಿಂದ ನ. 14ರಂದು ನಗರದ ಪಾಂಡೇಶ್ವರದಲ್ಲಿರುವ ಯೂನಿಯನ್ ಬ್ಯಾಂಕ್ ಎದುರುಗಡೆ ಇರುವ ನೆಹರೂ ಪಾರ್ಕ್ ನಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರ ಜನ್ಮದಿನಾಚರಣೆ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಮಂಗಳೂರು ತಾಲೂಕು ಸೇವಾದಳ ಅಧ್ಯಕ್ಷ ಪ್ರಭಾಕರ್ ಶ್ರೀಯನ್ ಮಾತನಾಡಿ, ನೆಹರೂರವರು ಪ್ರಧಾನಿಯಾಗಿ ದೇಶಕ್ಕೆ ಅನೇಕ ಯೋಜನೆಗಳನ್ನು...

ಸಂಚಾರ ನಿಯಮ ಉಲ್ಲ೦ಘನೆ: ಒ೦ದು ವಾರದಲ್ಲಿ 2543 ಪ್ರಕರಣ ದಾಖಲು

0
ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಚಾಲಕರ ವಿರುದ್ದ ದಿನಾಂಕ 5-11-2023 ರಿಂದ 12-11-2023 ರ ವರೆಗೆ ಒಟ್ಟು 2543 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಾಲನೆ , ಮದ್ಯಪಾನ ಮಾಡಿ ವಾಹನ ಚಾಲನೆ ಹಾಗೂ ಸಂಚಾರ ನಿಯಮ...

ವೈದ್ಯಕೀಯ ವಿದ್ಯಾರ್ಥಿನಿ ಅತ್ಮಹತ್ಯೆ

0
ಮಂಗಳೂರು: ನಗರದ ಎ.ಜೆ. ವೈದ್ಯಕೀಯ ಸ೦ಸ್ಥೆಯ ಎ೦ಬಿಬಿಸ್ ವಿದ್ಯಾರ್ಥಿನಿ ಪ್ರಕೃತಿ ಶೆಟ್ಟಿ (20) ಹಾಸ್ಟೇಲ್ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ. ಪ್ರಕೃತಿ ಶೆಟ್ಟಿ ಅವರು ಸೋಮವಾರ ಬೆಳಗ್ಗಿನ ಜಾವ 3 ಗಂಟೆಯ ವೇಳೆಗೆ ಕಾಲೇಜಿನ ಮಹಿಳೆಯರ ಹಾಸ್ಟೇಲ್‌ನ ಕಟ್ಟಡದ 6 ನೇ ಅಂತಸ್ತಿನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿನಿ...

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

0
ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ನವೆಂಬರ್ 16 ರಿಂದ 18ರ ವರೆಗೆ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.ನವೆಂಬರ್ 16ರ ಗುರುವಾರ ರಾತ್ರಿ 9.25ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ ರಾತ್ರಿ 11 ಗಂಟೆಗೆ ಸುಳ್ಯಕ್ಕೆ ತೆರಳಿ ಅರಣ್ಯ ಇಲಾಖೆ...

ಯಕ್ಷಸಿರಿ ಯಕ್ಷಗಾನ ತರಬೇತಿ ಯಕ್ಷಸಿರಿ ಯಕ್ಷಗಾನ ಕೇಂದ್ರದ ಪ್ರಥಮ ವಾರ್ಷಿಕೋತ್ಸವ

ಸುರತ್ಕಲ್ :ಯಕ್ಷ ಶಿಕ್ಷಣ ದೇವರ ಪೂಜೆಗೆ ಸಮಾನ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ 40 ಸರಕಾರಿ ಶಾಲೆಗಳ 4 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಯಕ್ಷ ಶಿಕ್ಷಣ ನೀಡಲಾಗುತ್ತಿದೆ. ಯಕ್ಷಗುರು ರಾಕೇಶ್ ರೈ ಅಡ್ಕ ಜಿಲ್ಲೆಯ ಅಗಮಾನ್ಯ ಯಕ್ಷಗಾನ ಗುರುಗಳಲ್ಲಿ ಒಬ್ಬರಾಗಿದ್ದಾರೆ, '' ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ...