24.5 C
Karnataka
Thursday, April 30, 2026

ಪಿಲಿಕುಳ: ವಿಜ್ಞಾನ ಪ್ರದರ್ಶನ,ರಸಪ್ರಶ್ನೆ ಸ್ಪರ್ಧೆ

ಮಂಗಳೂರು: ಕರಾವಳಿ ಉತ್ಸವ 2025-26 ರ ಅಂಗವಾಗಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲು ಹಾಗೂ ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿವಿಧ ಕಾಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮಗಳಿಗೆ ಕೇಂದ್ರದ ನಿರ್ದೇಶಕ ಡಾ.ಕೆ ವಿ ರಾವ್ ಚಾಲನೆ ನೀಡಿದರು. ನಂತರ ನಡೆದ ಮನೋರಂಜನೆಗಾಗಿ ವಿಜ್ಞಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಕೇಂದ್ರದ ಕ್ಯುರೇಟರ್ ಜಗನ್ನಾಥ್ ಹಲವು ವಿಜ್ಞಾನದ ಪ್ರಯೋಗಗಳನ್ನು ಮನೋರಂಜನಾತ್ಮಕವಾಗಿ ಮಾಡಿ ತೋರಿಸಿದರು. ಭಾಗವಹಿಸಿದವರೆಲ್ಲರೂ ತುಂಬಾ ಕೌತುಕ ಹಾಗೂ ಕುತೂಹಲದಿಂದ ವೀಕ್ಷಿಸಿ ಸಂತಸಪಟ್ಟರು.
ಎರಡನೇ ದಿನದಂದು ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮೂರನೇ ದಿನದಂದು ವಾಟರ್ ರಾಕೆಟ್ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಭಾಗವಹಿಸಿದವರಿಗೆ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು.
ನಾಲ್ಕನೇ ದಿನದಂದು ತಾರಾಲಯದಲ್ಲಿ ವಿದ್ಯಾರ್ಥಿಗಳಿಗೆ/ಅಧ್ಯಾಪಕರಿಗೆ/ಸಾರ್ವಜನಿಕರಿಗೆ ಖಗೋಳ ಶಾಸ್ತ್ರದ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. ಕೇಂದ್ರದ ವೈಜ್ಞಾನಿಕಾಧಿಕಾರಿ ವಿಘ್ನೇಶ್ ಭಟ್ ತಾರಾಲಯದ ಡೋಮ್‍ನಲ್ಲಿ ಆಕಾಶ ಕಾಯಗಳ ಪರಿಚಯ ಮತ್ತು ವೀಕ್ಷಣೆಯನ್ನು ಮಾಡಿಕೊಟ್ಟರು.
ಕರಾವಳಿ ಉತ್ಸವದ ಅಂಗವಾಗಿ ಡ್ರೋನ್ ಶೋ ಪ್ರಾತ್ಯಕ್ಷಿಕೆಯನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಇನ್ನೊವೇಶನ್ ಹಬ್‍ನ ಮೆಂಟರ್‍ಗಳಾದ ಹೃತಿಕ್ ಮತ್ತು ಆದರ್ಶ್ ಧನಂಜಯ್ ಡ್ರೋನ್ ಶೋ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಿದರು.
ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು/ ಅಧ್ಯಾಪಕರು/ ಸಾರ್ವಜನಿಕರು ಭಾಗವಹಿಸಿ ಸಂತಸಪಟ್ಟರು. ಕೇಂದ್ರದ ಎಲ್ಲಾ ಸಿಬ್ಬಂದಿಗಳು ಕಾರ್ಯಕ್ರಮವನ್ನು ಆಯೋಜನೆ ಮಾಡುವಲ್ಲಿ ಸಹಕರಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles