21.7 C
Karnataka
Monday, June 15, 2026

ಯುವನಿಧಿ ಪ್ಲಸ್‍ಗೆ ನೋಂದಣಿ ಕಡ್ಡಾಯ

ಮಂಗಳೂರು: ಯುವನಿಧಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿರುವ ಫಲಾನುಭವಿಗಳು “ಯುವನಿಧಿ ಪ್ಲಸ್” ಯೋಜನೆಯಡಿ ಕೌಶಲ್ಯ ತರಬೇತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.
ಯುವನಿಧಿ ಯೋಜನೆಯಲ್ಲಿ ಈಗಾಗಲೇ ಕಳೆದ 6 ತಿಂಗಳುಗಳು ಅಥವಾ ಅದಕ್ಕಿಂತ ಹೆಚ್ಚಿನ ತಿಂಗಳಿನಿಂದ ಯೋಜನೆಯಡಿ ಡಿ.ಬಿ.ಟಿ ಮೂಲಕ ಹಣ ಪಡೆಯುತ್ತಿರುವವರು ಕೌಶಲ್ಯ ತರಬೇತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕಾಗಿರುತ್ತದೆ. ಕೌಶಲ್ಯ ತರಬೇತಿಗಳನ್ನು ಪಡೆಯುವ ಮೂಲಕ ಉದ್ಯೋಗ ಪಡೆಯಲು ಯುವನಿಧಿ ಪ್ಲಸ್ ಯೋಜನೆಯು ಸಹಕಾರಿಯಾಗಲಿದೆ.
ಯುವನಿಧಿ ಫಲಾನುಭವಿಗಳು ಸುಲಭವಾಗಿ ಯುವನಿಧಿ ಪ್ಲಸ್ ಯೋಜನೆಯ ನೋಂದಾವಣಿ ಮಾಡಿಕೊಳ್ಳಬಹುದು. ಉಚಿತ ಕೌಶಲ್ಯ ತರಬೇತಿಯನ್ನು ಪಡೆಯಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವೆಬ್‍ಸೈಟ್ https://www.kaushalkar.com/app/registration_verify ಮುಖಾಂತರ ಯುವನಿಧಿ ಪ್ಲಸ್ ಯೋಜನೆಗೆ ನೊಂದಾಯಿಸಿಕೊಳ್ಳಬಹುದು. ಜಿಟಿಟಿಸಿ, ಸಿಡಾಕ್, ಕೆಜಿಟಿಟಿಐ, ಮೋಕ್ಷಗುಂಡಂ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಮುಖಾಂತರ ಸರ್ಕಾರ ಯುವನಿಧಿ ಪ್ಲಸ್ ಅಡಿಯಲ್ಲಿ ತರಬೇತಿ ನೀಡಲು ಮುಂದಾಗಿದೆ. ಈ ಮೇಲಿನ ಸಂಸ್ಥೆಗಳ ಮೂಲಕ ಕೌಶಲ್ಯ ತಬೇತಿಯನ್ನು ಪಡೆದುಕೊಳ್ಳಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles