ಮಂಗಳೂರು : ನಗರದ ಲಾಲ್ ಭಾಗ್ ನಲ್ಲಿರುವ ಕಾಂಪ್ಲೇಕ್ಸ್ ನ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮಾರಾಟ ಹಾಗೂ ಸರಬರಾಜು ಮಾಡುತ್ತಿದ್ದ ಇ-ಸಿಗರೇಟು ಮತ್ತು ಇತರ ಪರಿಕರ ಸೇರಿ ಒಟ್ಟು 9,72,745 ರೂ – ಬೆಲೆಬಾಳುವ ಸೊತ್ತುಗಳು ಬರ್ಕೆ ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಈ ಸ೦ಬ೦ಧ ಅಂಗಡಿಯ ಮಾಲಕರು ಸೇರಿ ಮೂವರು ಆರೋಪಿಗಳ ಮೇಲೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಂಗಳೂರು ನಗರದ ಲಾಲ್ ಬಾಗ್ ನ ಸಾಯಿಬೀನ್ ಕಾಂಪ್ಲೇಕ್ಸ್ ನ ಅಂಗಡಿಯೊ೦ದರಲ್ಲಿ ನಿಷೇಧಿತವಾಗಿರುವ ಇ-ಸಿಗರೇಟ್ ಗಳನ್ನು, ಯಾವುದೇ ರಹದಾರಿಯನ್ನು ಪಡೆಯದೇ ಅಕ್ರಮವಾಗಿ ಸ್ವದೇಶಿ ಮತ್ತು ವಿದೇಶಿಯ ಸಿಗರೇಟ್ ಗಳನ್ನು ಹಾಗೂ ಹುಕ್ಕಾ ಸೇವನೆ ಮಾಡಲು ಬಳಸುವ ಸಾಧನಗಳನ್ನು ಅಕ್ರಮವಾಗಿ ಇಟ್ಟುಕೊಂಡು ಸಾರ್ವಜನಿಕರಿಗೆ, ಯುವಕರ-ಯುವತಿಯರಿಗೆ ಸರಬರಾಜು ಹಾಗೂ ಮಾರಾಟ ಮಾಡುತ್ತಿದ್ದಾರೆಂದು ಖಚಿತ ಮಾಹಿತಿ ಮೇರೆಗೆ ಬರ್ಕೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮೋಹನ್ ಕೊಟ್ಟಾರಿರವರು ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಿಗಳೊಂದಿಗೆ ಶನಿವಾರ ಸಂಜೆ ದಾಳಿ ನಡೆಸಿದ್ದರು.
ಗೆ ದಾಳಿ ಮಾಡಿದಾಗ ಒಟ್ಟು 847 (ಅಂದಾಜು ಮೌಲ್ಯ 4,43,125/-) ವಿವಿಧ ಕಂಪನಿಗಳ ಇ-ಸಿಗರೇಟ್ ಗಳನ್ನು, ಸಿಗರೇಟ್ ನ ಪ್ಯಾಕ್ ನ ಮೇಲೆ 85% ಪ್ರತಿಶತ ಅದರ ಸೇವನೆಯಿಂದ ಆಗುವ ದುಷ್ಪರಿಣಾಮದ ಚಿತ್ರವನ್ನು ಪ್ರದರ್ಶಿಸದೇ ಇರುವ ವಿವಿಧ ಕಂಪನಿಗಳ ಸ್ವದೇಶಿ ಮತ್ತು ವಿದೇಶಿಯ ಒಟ್ಟು 10 Pack (412 Box) ಮತ್ತು 86 Pack ಸಿಗರೇಟ್ ಗಳು (ಅಂದಾಜು ಮೌಲ್ಯ 5,09120/-) ಮತ್ತು ಹುಕ್ಕಾ ಸೇವನೆ ಮಾಡುವ ಬಳಸುವ ವಿವಿಧ ಆಕೃತಿಗಳ 25 (ಅಂದಾಜು ಮೌಲ್ಯ ರೂ.20,500/-) ಸಾಧನಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ಈ ಸ೦ಬ೦ಧ ಬಂಟ್ವಾಳ ಗಣೇಶ್ ಕೋಡಿಯ ಸಂತೋಷ್ ( 32) ಕುದ್ರೋಳಿಯ ಇಬ್ರಾಹಿಂ ಇರ್ಷಾದ್ ( 33 ) ಹಾಗೂ ಅಂಗಡಿ ಮಾಲಕ ಶಿವು ದೇಶಕೋಡಿ ಎಂಬುವರ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


