ಮಂಗಳೂರು: ಕೇಂದ್ರ ಸರ್ಕಾರದಿಂದ 2016ರ ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಪರಿಷ್ಕರಿಸಿ, ಹೊಸ ‘ಘನತ್ಯಾಜ್ಯ ನಿರ್ವಹಣೆ ನಿಯಮಗಳು 2026’ ಅನ್ನು ಏಪ್ರಿಲ್ 1 ರಿಂದ ಅನುμÁ್ಠನಗೊಳಿಸಲಾಗುತ್ತಿದೆ.
ಈ ಹೊಸ ನಿಯಮಾವಳಿಯ ಅನ್ವಯ, ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಎಲ್ಲಾ ಘನತ್ಯಾಜ್ಯ ಉತ್ಪಾದಕರು ತ್ಯಾಜ್ಯವನ್ನು ಮೂಲದಲ್ಲೇ 1) ಹಸಿ (: ಅಡುಗೆ ಮನೆ ತ್ಯಾಜ್ಯ, ಹಣ್ಣು ಮತ್ತು ತರಕಾರಿ ಸಿಪ್ಪೆಗಳು, ಉಳಿದ ಆಹಾರ, ಮಾಂಸದ ತ್ಯಾಜ್ಯ, ಮೊಟ್ಟೆಯ ಹವಡು, ಹೂವು, ಎಲೆಗಳು ಹಾಗೂ ಇತ್ಯಾದಿ,
2) ಒಣ : ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು, ಪೇಪರ್, ಕಾರ್ಡ್‍ಬೋರ್ಡ್, ರಬ್ಬರ್, ಹಾಗೂ ಇತ್ಯಾದಿ,
3) ನೈರ್ಮಲ್ಯ (: ಬಳಸಿದ ಸ್ಯಾನಿಟರಿ ಪ್ಯಾಡ್‍ಗಳು, ಡೈಪರ್‍ಗಳು, ಕಾಂಡೋಮ್‍ಗಳು, ಬ್ಯಾಂಡೇಜ್‍ಗಳು ಹಾಗೂ ಇತ್ಯಾದಿ. ಮತ್ತು 4) ವಿಶೇಷ ಕಾಳಜಿಯ ತ್ಯಾಜ್ಯ ಹಳೆಯ ಬ್ಯಾಟರಿಗಳು, ಎಲ್.ಇ.ಡಿ ಬಲ್ಬ್‍ಗಳು, ಟ್ಯೂಬ್‍ಲೈಟ್‍ಗಳು, ಪೇಂಟ್ ಡಬ್ಬಿಗಳು, ಕೀಟನಾಶಕಗಳ ಬಾಟಲಿಗಳು, ಥರ್ಮಾಮೀಟರ್‍ಗಳು ಹಾಗೂ ಇತ್ಯಾದಿ ಎಂದು ನಾಲ್ಕು ವಿಧಗಳಾಗಿ ವಿಂಗಡಿಸಿ ಪಾಲಿಕೆಯ ಘನತ್ಯಾಜ್ಯ ವಾಹನಗಳಿಗೆ ಹಸ್ತಾಂತರಿಸುವುದು ಕಡ್ಡಾಯವಾಗಿರುತ್ತದೆ.
ಹಸಿ ತ್ಯಾಜ್ಯ ಮತ್ತು ನೈರ್ಮಲ್ಯ ತ್ಯಾಜ್ಯವನ್ನು ಪ್ರತಿದಿನ ಸಂಗ್ರಹಿಸಲಾಗುತ್ತದೆ ಹಾಗೂ ಒಣ ತ್ಯಾಜ್ಯ ) ಮತ್ತು ವಿಶೇಷ ಕಾಳಜಿಯ ತ್ಯಾಜ್ಯವನ್ನು ಪ್ರತಿ ಶುಕ್ರವಾರದಂದು ಮಾತ್ರ ಸಂಗ್ರಹಿಸಲಾಗುತ್ತದೆ.
ನಿಯಮಾವಳಿಯಡಿ, ಪ್ರತಿ ದಿನ ಸರಾಸರಿ 100 ಕೆ.ಜಿ ಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಅಥವಾ 20,000 ಚದರ ಮೀಟರ್‍ಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಕಚೇರಿಗಳು, ಮಾಲ್‍ಗಳು, ಆಸ್ಪತ್ರೆಗಳು ಮತ್ತು ವಸತಿ ಸಮುಚ್ಚಯಗಳನ್ನು ಹಾಗೂ ದಿನಕ್ಕೆ 40,000 ಲೀಟರ್‍ಗಿಂತ ಹೆಚ್ಚು ನೀರನ್ನು ಬಳಸುವ ಘಟಕಗಳನ್ನು ಬೃಹತ್ ತ್ಯಾಜ್ಯ ಉತ್ಪಾದಕರು (ಎಂದು ವರ್ಗೀಕರಿಸಲಾಗಿರುತ್ತದೆ.
ಘನತ್ಯಾಜ್ಯ ನಿರ್ವಹಣೆಯಲ್ಲಿ ಹಾಗೂ ವಿಲೇವಾರಿಗಳಲ್ಲಿ ಉಲ್ಲಂಘನೆಗಳು ಕಂಡುಬಂದಲ್ಲಿ ಮಂಗಳೂರು ಮಹಾನಗರಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಉಪವಿಧಿಗಳು 2019 ರ ಅನ್ವಯವೇ ದಂಡ ವಿಧಿಸಲಾಗುತ್ತದೆ.
ಆದುದರಿಂದ ಎಲ್ಲಾ ಸಾರ್ವಜನಿಕರು ತ್ಯಾಜ್ಯವನ್ನು ನಾಲ್ಕು ವಿಧಗಳಾಗಿ ವಿಂಗಡಿಸಲು ಹಾಗೂ ಬೃಹತ್ ತ್ಯಾಜ್ಯ ಉತ್ಪಾದಕರು ಹಸಿ ತ್ಯಾಜ್ಯವನ್ನು ತಮ್ಮ ಆವರಣದಲ್ಲೇ ಸಂಸ್ಕರಿಸಲು ಈ ಮೂಲಕ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಮಯದಲ್ಲಿ ಮಹಾನಗರಪಾಲಿಕೆಯ ಆರೋಗ್ಯ ವಿಭಾಗಕ್ಕೆ ಭೇಟಿ ನೀಡಬಹುದು ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


