24.5 C
Karnataka
Thursday, April 30, 2026

ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಐಐ ಮತ್ತು ರೋಬೋಟಿಕ್ಸ್ ತರಬೇತಿ ಕಾರ್ಯಕ್ರಮ

ಬೆಂಗಳೂರು: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಮಾಹಿತಿ ತಂತ್ರಜ್ಞಾನ ಶಾಲೆಯ ಇನ್ನೋವೇಷನ್ ಕೌನ್ಸಿಲ್ ಆಶ್ರಯದಲ್ಲಿ, ಕಂಪ್ಯೂಟರ್ ಸೈನ್ಸ್ ಮತ್ತು ಡೇಟಾ ಅನಾಲಿಟಿಕ್ಸ್ ವಿಭಾಗಗಳ ಜಂಟಿ ಸಂಘಟನೆಯಲ್ಲಿ ನಾಲ್ಕು-ದಿನಗಳ ಐಐ ಮತ್ತು ರೋಬೋಟಿಕ್ಸ್ ತರಬೇತಿ ಕಾರ್ಯಕ್ರಮವನ್ನು ನ. 20 ರಿಂದ 25 ರ ವರೆಗೆ ಮ್ಯಾಜಿಸ್ ಬ್ಲಾಕ್’ನ ಕಾನ್ಫರೆನ್ಸ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮದ ಸಮನ್ವಯಕರಾಗಿದ್ದ ಡಾ. ಅನ್ನಿ ಸಿರಿಯನ್, ಪ್ರೇಮ್ ಮತ್ತು ಅರ್ರನ್ ಇವರು, ಡೀನ್ ಡಾ. ಬೋಜಮ್ಮಾ, ರೆ। ಫಾ। ಡೆನ್ಝಿಲ್ ಮತ್ತು ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತಿ ಅವರ ಶೈಕ್ಷಣಿಕ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ತಿಂಕ್‌ಪ್ರೋ ಅಕಾಡೆಮಿಯ ಬೋಧಕರಾದ ತರುಣ್ ಶರ್ಮಾ ಅವರು ಕಾರ್ಯಕ್ರಮ ಉದ್ಘಾಟಿಸಿದರು. ತರಬೇತಿಯ ಉದ್ದೇಶಗಳು, ರಚನೆ ಮತ್ತು ನಿರೀಕ್ಷಿತ ಫಲಿತಾಂಶಗಳನ್ನು ಅವರು ಮುಂದಿಟ್ಟರು. ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್’ನ ಮೂಲಭೂತ ಪರಿಕಲ್ಪನೆಗಳೊಂದಿಗೆ ಪರಿಚಯಿಸಲಾಯಿತು. ಈ ಅವಧಿಯಲ್ಲಿ ಮಾರ್ಗದರ್ಶನದೊಂದಿಗೆ ಪ್ರಾಯೋಗಿಕ ಕೋಡಿಂಗ್ ಸೆಶನ್’ಗಳು ಮತ್ತು ವಿದ್ಯಾರ್ಥಿಗಳು ಆರಂಭಿಕ ರೋಬೋಟಿಕ್ ಮಾದರಿಯನ್ನು ನಿರ್ಮಿಸಿ ಪ್ರೋಗ್ರಾಮ್ ಮಾಡುವ ಚಟುವಟಿಕೆ ನಡೆಯಿತು. ಇದರ ಮೂಲಕ ಸೈದ್ಧಾಂತಿಕ ಕಲಿಕೆಗೆ ಮತ್ತು ಪ್ರಾಯೋಗಿಕ ಅನುಷ್ಠಾನಕ್ಕೆ ಇರುವ ಸಂಬಂಧವನ್ನು ಅರಿಯಲು ವಿದ್ಯಾರ್ಥಿಗಳು ಸಾಧ್ಯವಾದವು,
ಐಐ ಮತ್ತು ರೋಬೋಟಿಕ್ಸ್ ತರಬೇತಿ ಕಾರ್ಯಕ್ರಮವು ರೋಬೋಟಿಕ್ಸ್ ಮತ್ತು ಬುದ್ಧಿವಂತ ವ್ಯವಸ್ಥೆಗಳ ಕುರಿತು ಸಮಗ್ರ ಆರಂಭಿಕ ಅನುಭವವನ್ನು ಭಾಗವಹಿಸುವವರಿಗೆ ಒದಗಿಸುವುದರಲ್ಲಿ ತನ್ನ ಉದ್ದೇಶವನ್ನು ಸಾಧಿಸಿದೆ. ಸೈದ್ಧಾಂತಿಕ ಬೋಧನೆ ಮತ್ತು ಪ್ರಾಯೋಗಿಕ ಅನ್ವಯದ ರಚನಾತ್ಮಕ ಮಿಶ್ರಣದ ಮೂಲಕ, ಈ ಕಾರ್ಯಕ್ರಮವು ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಿತು, ತಾಂತ್ರಿಕ ಜಿಜ್ಞಾಸೆಯನ್ನು ಉತ್ತೇಜಿಸಿತು ಮತ್ತು ಉದಯೋನ್ಮುಖ ತಂತ್ರಜ್ಞಾನದ ಕ್ಷೇತ್ರದಲ್ಲಿ ಅತ್ಯಗತ್ಯ ಮೂಲಭೂತ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿತು. ಸಂಘಟಕ ವಿಭಾಗಗಳು, ಸಮನ್ವಯಕರು ಮತ್ತು ಭಾಗವಹಿಸಿದ ವಿದ್ಯಾರ್ಥಿಗಳ ಪ್ರಯತ್ನಗಳನ್ನು ತಿಂಕ್‌ಪ್ರೋ ಅಕಾಡೆಮಿ ಗುರುತಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles