24.5 C
Karnataka
Thursday, April 30, 2026

ತಣ್ಣೀರುಬಾವಿ ಬ್ಲೂ ಪ್ಲ್ಯಾಗ್ ಬೀಚ್ , ಪಣಂಬೂರು ಬೀಚ್ ಕಾರ್ಯಕ್ರಮಗಳು: ನಿಗದಿ ಪಡಿಸಿರುವ ಪಾರ್ಕಿಂಗ್ ಸ್ಥಳಗಳು

ಮ೦ಗಳೂರು: ಕರಾವಳಿ ಉತ್ಸವ ಕಾರ್ಯಕ್ರಮದ ಪ್ರಯುಕ್ತ ತಣ್ಣೀರುಬಾವಿ ಬ್ಲೂ ಪ್ಲ್ಯಾಗ್ ಬೀಚ್‌ನಲ್ಲಿ ಜ. 17ಹಾಗೂ ಜ.186 ರಂದು ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಕಾರ್ಯಕ್ರಮ ನಡೆಯಲಿರುತ್ತದೆ. ಈ ಕಾರ್ಯಕ್ರಮಕ್ಕೆ ಗಣ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಮಧ್ಯಾಹ್ನ 3 ಗಂಟೆಯ ನಂತರ ಕೊಟ್ಟಾರಚೌಕಿ – ಪಣಂಬೂರು ರಾಷ್ಟ್ರೀಯ ಹೆದ್ದಾರಿ ಮತ್ತು ತಣ್ಣೀರುಬಾವಿ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳು ಇರುತ್ತದೆ. ಮೇಲಿನ ಕಾರ್ಯಕ್ರಮ ನಡೆಯುವ ಸಮಯ ಕುದುರೆಮುಖ ಜಂಕ್ಷನ್‌ನಿಂದ ತಣ್ಣೀರುಬಾವಿ ಬೀಚ್ ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ ಎ೦ದು ಮಂಗಳೂರು ನಗರ. ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

.ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗೆ ಸುಲ್ತಾನ್ ಬತ್ತೇರಿಯಿಂದ ಫೇರಿಯನ್ನು ಅಥವಾ ಕೆ.ಐ.ಓ.ಸಿ.ಎಲ್ ನಿಂದ ತಣ್ಣೀರುಬಾವಿಗೆ ಉಚಿತ ಕೆ.ಎಸ್.ಅರ್.ಟಿ.ಸಿ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದ್ದು, ತಮ್ಮ ಅನುಕೂಲಕ್ಕಾಗಿ ಉಪಯೋಗಿಸಬಹುದಾಗಿದೆ.

ನಿಗದಿ ಪಡಿಸಿರುವ ಪಾರ್ಕಿಂಗ್ ಸ್ಥಳಗಳು:

  1. ದೋಸ್ತ್ ಗ್ರೌಂಡ್
  2. ಕಟ್ಟೆ ಗ್ರೌಂಡ್ ಪಾರ್ಕಿಂಗ್ ಸ್ಥಳ
  3. ತಣ್ಣೀರು ಬಾವಿ ಮಸೀದಿ ಎದುರು ಪಾರ್ಕಿಂಗ್ ಸ್ಥಳ
  4. ರಫ್ತಾರ್ ಪಾರ್ಕಿಂಗ್
  5. ತಣ್ಣೀರುಬಾವಿ ಬೀಚ್ ಪಾರ್ಕಿಂಗ್
  6. ಡೆಲ್ಟಾ ಮೈದಾನ ಪಾರ್ಕಿಂಗ್
  7. ಫೀಜಾ ಕ್ರಿಕೆಟ್ ಗ್ರೌಂಡ್ (ಹೋಟೆಲ್ ನಿತ್ಯಾಧರ ಮುಂಭಾಗದ ಪಾರ್ಕಿಂಗ್ ಮೈದಾನ)
  8. ಎ.ಜೆ ಶೆಟ್ಟಿ ರವರ ಗ್ರೌಂಡ್ (ಎಸ್.ಇ.ಝ್ ರಸ್ತೆ)

ಪಣಂಬೂರು ಬೀಚ್ ಕಾರ್ಯಕ್ರಮ:-

ಪಣಂಬೂರು ಬೀಚ್ ನಲ್ಲಿ ಜ.1 ಮತ್ತು 18 ರಂದು ಮ್ಯೂಸಿಕ್ ಫೆಸ್ಟಿವಲ್, ತಾಯ್ಕಡಂ ಬ್ರಿಡ್ಜ್ ಕಾನ್ಸ್‌ರ್ಟ್, ಜಾವೇದ್ ಅಲಿ ನೈಟ್, ಮರಳು ಶಿಲ್ಪಕಲೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿರುತ್ತದೆ. ಸದರಿ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವುದರಿಂದ ಮಧ್ಯಾಹ್ನ 3-೦೦ ಗಂಟೆಯ ನಂತರ ಕೂಳೂರು – ಪಣಂಬೂರು ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿ ಮತ್ತು ಪಣಂಬೂರು ಬೀಚ್ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳು ಇರುತ್ತದೆ.

ಮೇಲಿನ ಕಾರ್ಯಕ್ರಮಗಳು ನಡೆಯುವ ಸಮಯ ಕುದುರೆಮುಖ ಜಂಕ್ಷನ್‌ನಿಂದ ಪಣಂಬೂರು ಜಂಕ್ಷನ್ ವರೆಗೆ ಮತ್ತು ಡಿಕ್ಸಿ ಕ್ರಾಸ್‌ನಿಂದ ಪಣಂಬೂರು ಬೀಚ್ ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ ಎ೦ದು ಮಂಗಳೂರು ನಗರ. ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಗದಿ ಪಡಿಸಿರುವ ಪಾರ್ಕಿಂಗ್ ಸ್ಥಳಗಳು:

  1. ಕೆ.ಕೆ ಗೇಟ್ ಟ್ರಕ್ ಯಾರ್ಡ್ ಪಾರ್ಕಿಂಗ್
  2. ಪಣಂಬೂರು ಬೀಚ್ ಪಾರ್ಕಿಂಗ್

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles