ಮ೦ಗಳೂರು: ಮಂಜೇಶ್ವರದಲ್ಲಿರುವ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ “ಕ್ರಿಸ್ಮಸ್ ಸಂಭ್ರಮ – 2025” ಅನ್ನು ಅತ್ಯಂತ ಭಕ್ತಿಭಾವ ಮತ್ತು ಹಬ್ಬದ ಉಲ್ಲಾಸದೊಂದಿಗೆ ಆಚರಿಸಲಾಯಿತು.
ಕ್ರಿಸ್‌ಮಸ್ ಅದರ ನಿಜವಾದ ಅರ್ಥದಲ್ಲಿ ಹೊಸತನದ ಜನನ, ಸಂತೋಷ, ಮಾನವಕುಲಕ್ಕೆ ಸೇವಾ ಮನೋಭಾವವನ್ನು ಈ ಸಮಾರಂಭ ಸಾರಿತು.
ಕ್ರಿಸ್‌ಮಸ್ ಸಂಭ್ರಮ – 2025.” ವು ಸಾಂಸ್ಕೃತಿಕ ಹಬ್ಬ, ವಿಶ್ವ ದಾಖಲೆ ಹೊಂದಿರುವ ರೆಮೋನಾ ಇವೆಟ್ ಪಿರೇರಾ ಅವರಿಂದ ಯೇಸುವಿನ ಜನನದ ಕಥೆಯನ್ನು ಅಭಿನಯಿಸುವ ಭರತನಾಟ್ಯ ಪ್ರದರ್ಶನ ಮತ್ತು ಪ್ರಸಿದ್ಧ ಗಾಯಕರಾದ ಜೋಶಲ್ ಮತ್ತು ಜೇಸನ್ ಅವರ ಸುಮಧುರ ಕ್ಯಾರೋಲ್ ಗಾಯನ, ಮಾಸ್ಟರ್ ಸಂಗೀತಗಾರ ಸಂಜಯ್ ರೊಡ್ರಿಗಸ್ ನಿರ್ದೇಶನ, ಹೊರಿಝೊನ್ ತಂಡ ಮತ್ತು ಅರ್ಬನ್ ಗ್ರೂವ್ ತಂಡಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನಗಳ ಸೂಪರ್ ಕಾಂಬೊ ಆಗಿತ್ತು.
ಅತೀ ವಂದನೀಯ ಬಿಷಪ್ ಹೇಮಚಂದ್ರ ಕುಮಾರ್,ಚರ್ಚ್ ಒಫ಼್ ಸೌತ್ ಇಂಡಿಯಾ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಗೌರವಾನ್ವಿತ ಅತಿಥಿಗಳಾಗಿ ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ವಸಂತ್ ಶೆಟ್ಟಿ ,
ಕಾಸರಗೋಡು ಜಿಲ್ಲಾ ಪಂಚಾಯತ ಸದಸ್ಯ ಹರ್ಷದ್ ವೋರ್ಕಾಡಿ ದೆಹಲಿಯ ಫಾರ್ಚೂನ್ ಲೈಫ್ ವೆಲ್ತ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಮತ್ತು ಬಾಂಬೆಯ ಪಿಟಿಐ ಕನ್ಸಲ್ಟೆನ್ಸಿಯ ಮಾಲೀಕ ಜೋಸೆಫ್ ಎಲಿಯಾಸ್ ಮಿನೆಜಸ್,
ಈಶ್ವರ್ ಮಲ್ಪೆ, ಕೊ೦ಕಣಿ ಬಾಷಾ ಮಂಡಲದ ಅಧ್ಯಕ್ಷರು ಮತ್ತು ಪಿಂಗಾರ ಪತ್ರಿಕೆಯ ಸ್ಥಾಪಕರು, ಸಂಪಾದಕ. ರೇಮಂಡ್ ಡಿ ಕುನ್ಹಾ ತಾಕೋಡೆ,ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯ ಸಂಯೋಜಿತ ನಿರ್ದೇಶಕ ರೆವರೆಂಡ್ ಫಾದರ್ ವಿನ್ಸೆಂಟ್ ಕ್ರಾಸ್ತಾ, ಸ್ನೇಹಾಲಯದ ರೆವರೆಂಡ್ ಫಾದರ್ ಸಿರಿಲ್ ಡಿ ಸೋಜಾ ಅವರು ಆಗಮಿಸಿದ್ದರು.
ಬ್ರದರ್ ಜೋಸೆಫ್ ಕ್ರಾಸ್ತಾ ಅವರು ತಮ್ಮ ಪ್ರಸ್ತಾವಿಕವಾಗಿ ಮಾತಾಡಿ ಅತಿಥಿಗಳನ್ನು ಸ್ವಾಗತಿಸಿದರು. ಒಲಿವಿಯಾ ಕ್ರಾಸ್ತಾ ಧನ್ಯವಾದ ಅರ್ಪಿಸಿದರು.
ಸಂಗೀತ ನಿರ್ದೇಶಕ ಸಂಜಯ್ ರೊಡ್ರಿಗಸ್ ಅವರ ನಿರ್ದೇಶನದಲ್ಲಿ ಪ್ರಸಿದ್ಧ ಗಾಯಕರೊಂದಿಗೆ ಸಂಗೀತೋತ್ಸವ ಜರಗಿತು. ಸಂಗೀತೋತ್ಸವವನ್ನು ಶಾಂತಿ ಪ್ರಿಯಾ ಲಸ್ರಾದೊ ಅವರು ನಿರೂಪಿಸಿದರು.
ಜಿಯೋ ಡಿ’ಸಿಲ್ವಾ ಅವರು ನಿರೂಪಿಸಿದರು.


