24.3 C
Karnataka
Thursday, April 30, 2026

ಮನೆಯ ಬೀಗ ಮುರಿದು ಚಿನ್ನಾಭರಣ, ನಗದು ಕಳವು

ವೇಣೂರು : ಮನೆಯ ಬೀಗ ಮುರಿದು ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ವೇಣೂರು ಕುದ್ಯಾಡಿಯಲ್ಲಿ ನಡೆದಿದೆ.
ಕುದ್ಯಾಡಿ ಗ್ರಾಮದ ನಿವಾಸಿ ನೀತಾ ಎ೦ಬವರು ಮೇ 11 ರಂದು ಮದ್ಯಾಹ್ನ ಮನೆಯ ಬಾಗಿಲನ್ನು ಭದ್ರಪಡಿಸಿ, ತವರು ಮನೆಗೆ ಹೋಗಿದ್ದರು ಮೇ 13ರಂದು ಮಧ್ಯಾಹ್ನ, ಅವರ ಮನೆಯ ಬೀಗವನ್ನು ಯಾರೋ ಕಳ್ಳರು ಒಡೆದಿರುವ ಬಗ್ಗೆ ನೆರೆಮನೆಯರವರು ಕರೆ ಮಾಡಿ ತಿಳಿಸಿರುತ್ತಾರೆ. ತಕ್ಷಣ ಅವರು ಮನೆಗೆ ಬಂದು ನೋಡಲಾಗಿ, ಮನೆಯ ಮುಂಭಾಗದ ಬಾಗಿಲಿನ ಬೀಗವನ್ನು ಮುರಿದು ಒಳಪ್ರವೇಶಿಸಿರುವ ಕಳ್ಳರು, ಬೀರುವಿನ ಬೀಗವನ್ನು ಮುರಿದು, ಅದರಲ್ಲಿದ್ದ ಅಂದಾಜು ರೂ 1,98,000 ಮೌಲ್ಯದ 33 ಗ್ರಾಂ ಚಿನ್ನಾಭರಣಗಳು ಹಾಗೂ 40,000 ರೂ ನಗದು ಹಣವನ್ನು ಕಳವು ಮಾಡಿರುತ್ತಾರೆ. ಕಳವಾದ ನಗದು ಹಣ ಹಾಗೂ ಚಿನ್ನದ ಒಟ್ಟು ಮೌಲ್ಯ ಅಂದಾಜು ಸುಮಾರು 2,38,000 ಆಗಬಹುದು ಎಂಬುದಾಗಿ ಅ೦ದಾಜಿಸಲಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles