ಮಂಗಳೂರು: ನಗರದ ಬೊಂದೇಲ್‍ನಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‍ನಲ್ಲಿ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಕಮರ್ಷಿಯಲ್ ಪ್ರಾಕ್ಟೀಸ್ (ಇಂಗ್ಲೀಷ್ ಮತ್ತು ಕನ್ನಡ) ಹಾಗೂ ಲೈಬ್ರೆರಿ ಆ್ಯಂಡ್ ಇನ್‍ಫೆÇೀರ್‍ಮೇಶನ್ ಸೈನ್ಸ್ ಕೋರ್ಸ್‍ಗಳಿಗೆ ಸೇರಲು ಎಸ್.ಎಸ್.ಎಲ್.ಸಿ/ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರುವ ಹಾಗೂ ಲ್ಯಾಟರಲ್ ಎಂಟ್ರಿ ಸ್ಕೀಂ ಮುಖಾಂತರ 2ನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೋಮಾ ಕೋರ್ಸಿನ ಪ್ರವೇಶಕ್ಕೆ 2 ವರ್ಷಗಳ ಐ.ಟಿ.ಐ/ದ್ವಿತೀಯ ಪಿ.ಯು.ಸಿ(ವಿಜ್ಞಾನ)/ ದ್ವಿತೀಯ ಪಿ.ಯು.ಸಿ.(ತಾಂತ್ರಿಕ ವಿಷಯಗಳಲ್ಲಿ)ಉತ್ತೀರ್ಣರಾಗಿರುವ ಡಿಪ್ಲೋಮಾ ಕೋರ್ಸ್ ಸೇರಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 15. ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಸಲ್ಲಿಸಲು ಆಸಕ್ತಿಯುಳ್ಳ ವಿದ್ಯಾರ್ಥಿಗಳು ಬೊಂದೇಲ್ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ (ದೂರವಾಣಿ ಸಂಖ್ಯೆ 0824-2482334/ 9611320910/ 9844744845) ಸಂಪರ್ಕಿಸಿ, ನೇರವಾಗಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


