ಮಂಗಳೂರು: ಮಂಗಳೂರು ಉಪಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ (ಕೆಎ-19) ನೋಂದಣಿಗೊಂಡಿರುವ ಎಲ್ಲಾ ಇಲೆಕ್ಟ್ರಿಕ್ ಆಟೋ ರಿಕ್ಷಾಗಳ ಸಂಖ್ಯೆ: 3551 ಇದ್ದು, ಅದರಲ್ಲಿ 2162 ಇ-ಆಟೋ ರಿಕ್ಷಾ ಪರವಾನಿಗೆಗಾಗಿ ಅರ್ಜಿಗಳು ಈ ಕಛೇರಿಗೆ ಬಂದಿವೆ. ಇನ್ನು 1389 ಅರ್ಜಿಗಳನ್ನು ಈ ಕಛೇರಿಗೆ ಸಲ್ಲಿಸಿರುವುದಿಲ್ಲ. ಆದ್ದರಿಂದ ಈ ಕೂಡಲೇ ಬಾಕಿ ಉಳಿದಿರುವ 1389 ಇಲೆಕ್ಟ್ರಿಕ್ ಆಟೋರಿಕ್ಷಾ ಮಾಲಕರು ಪರವಾನಿಗೆಯನ್ನು ಪಡೆಯಲು ಅರ್ಜಿ ಸಲ್ಲಿಬೇಕು. ವಿಳಂಬ ಮಾಡಿದರೆ ಮೋಟಾರು ವಾಹನ ನಿಯಮಾವಳಿಗಳ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಪ್ರಭಾರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.


