ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನೋತ್ಸವ ಪ್ರಯುಕ್ತ ಶಿಕ್ಷಕರ ದಿನಾಚರಣೆ ಸಮಾರಂಭವು ಸೆಪ್ಟೆಂಬರ್ 5 ರಂದು ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಕಲಾಭವನ ಸಂತೆಕಟ್ಟೆ ಇಲ್ಲಿ ನಡೆಯಲಿದೆ.
2025 ನೇ ಸಾಲಿಗೆ ಕಿರಿಯ/ಹಿರಿಯ/ ಪ್ರೌಢಶಾಲಾ ವಿಭಾಗಗಳಿಂದ 7 ತಾಲ್ಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಿದ್ದಾರೆ.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ :
ಕಿರಿಯ ಪ್ರಾಥಮಿಕ ವಿಭಾಗ:- 1) ಶಾಲಿನಿ ಹೆಚ್.ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಂಡೇಶ್ವರ, ಮಂಗಳೂರು ಉತ್ತರ ವಲಯ, 2) ವೀಣಾ ಮೇರಿ ರೇಗೋ – ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ತಿಪ್ಲಬೆಟ್ಟು, ಮಂಗಳೂರು ದಕ್ಷಿಣ, 3)ಉಷಾಲತಾ ಹೆಗ್ಡೆ – ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಡ್ಯೋಡಿ ಮಾರ್ಪಾಡಿ, ಮೂಡಬಿದ್ರೆ, 4)ಶಾಂತಿ ಲೀನಾ ಮುಖ್ಯೋಪಾಧ್ಯಾಯರು – ಕಿರಿಯ ಪ್ರಾಥಮಿಕ ಶಾಲೆ ದೇವಸ್ಯ ಪಡೂರು, ಬಂಟ್ವಾಳ, 5) ಜಯ.ಕೆ – ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸುರ್ಯ, ಬೆಳ್ತಂಗಡಿ, 6)ಜಗನ್ನಾಥ.ಕೆ- ದ.ಕ.ಜಿಪಂ ಕಿರಿಯ ಪ್ರಾಥಮಿಕ ಶಾಲೆ ಅರೆಲ್ತಡಿ, ಪುತ್ತೂರು, 7) ಲಲಿತ ಕುಮಾರಿ ಎಸ್, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಂಡೋಡಿ ಸುಳ್ಯ.
ಹಿರಿಯ ಪ್ರಾಥಮಿಕ ವಿಭಾಗ :-
1)ಜಯಲಕ್ಷ್ಮಿ ದೈ.ಶಿ – ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಕಂಪಾಡಿ ಮೀನಕಳಿಯ, ಮಂಗಳೂರು ಉತ್ತರ ವಲಯ, 2) ಚಂದ್ರಶೇಖರ.ಸಿ.ಎಚ್.
ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲಗುಡ್ಡ ಸೋಮೇಶ್ವರ, ಮಂಗಳೂರು ದಕ್ಷಿಣ, 3) ಹರೀಶ ಕೆಎಂ ಮುಖ್ಯ ಶಿಕ್ಷಕರು -ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಾರು, ಮೂಡಬಿದ್ರೆ, 4) ಬಾಬು ನಾಯ್ಕ ಬಿ- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೀರ್ಕಜೆ ಕೇಪು, ಬಂಟ್ವಾಳ, 5) ಆರತಿ ಕುಮಾರಿ ದೈಹಿಕ ಶಿಕ್ಷಣ ಶಿಕ್ಷಕಿ- ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ನಿಟ್ಟಡೆ, ಬೆಳ್ತಂಗಡಿ, 6) ತಾರಾನಾಥ, ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಶಾಂತಿಗೋಡು, ಪುತ್ತೂರು, 7) ಶ್ರೀಧರ ಗೌಡ ಸ.ಹಿ.ಪ್ರಾ.ಶಾಲೆ ದೇವಚಳ್ಳ, ಸುಳ್ಯ.
ಪ್ರೌಢಶಾಲಾ ವಿಭಾಗ:-
1) ವಿಲ್ಮಾ ಪಿ. ಲೋಬೋ- ಲೇಡಿಹಿಲ್ ವಿಕ್ಟೋರಿಯಾ ಪ್ರೌಢಶಾಲೆ, ಮಂಗಳೂರು ಉತ್ತರ ವಲಯ, 2) ದುರ್ಗಾಲತಾ ಸಹ ಶಿಕ್ಷಕಿ- ಸರ್ಕಾರಿ ಪ್ರೌಢಶಾಲೆ ಪೆರ್ಮನ್ನೂರು, ಮಂಗಳೂರು ದಕ್ಷಿಣ, 3)ರತ್ನಾವತಿ ಆಚಾರ್. ಕೆ ಸಹಶಿಕ್ಷಕಿ- ಸರ್ಕಾರಿ ಪ್ರೌಢಶಾಲೆ ಪ್ರಾಂತ್ಯ, ಮೂಡಬಿದ್ರೆ, 4) ಆದಂ, ಸಹ ಶಿಕ್ಷಕರು- ಸರ್ಕಾರಿ ಪ್ರೌಢಶಾಲೆ ಸರಪಾಡಿ, ಬಂಟ್ವಾಳ, 5) ವಿಜಯಕುಮಾರ್.ಎಂ.- ಸರ್ಕಾರಿ ಪ್ರೌಢಶಾಲೆ ಪೆರ್ಲಬೈಪಾಡಿ, ಬೆಳ್ತಂಗಡಿ, 6) ಮೋಹನ ಎ ಚಿತ್ರಕಲಾ ಶಿಕ್ಷಕರು – ಸರ್ಕಾರಿ ಪ್ರೌಢಶಾಲೆ ಎಣ್ಮೂರು, ಸುಳ್ಯ.


