21.7 C
Karnataka
Monday, June 15, 2026

ಕೆಜಿಟಿಟಿಐ ಉಚಿತ ಕೌಶಲ್ಯ ತರಬೇತಿ

ಮಂಗಳೂರು: ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ)ಯು ಮಂಗಳೂರಿನ ಕದ್ರಿಹಿಲ್ಸ್‍ನಲ್ಲಿರುವ ಮಹಿಳಾ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೌಶಲ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಸಂಸ್ಥೆಯಲ್ಲಿ ಅಭ್ಯವಿರುವ ಅಲ್ಪಾವಧಿ ಕೋರ್ಸ್‍ಗಳಲ್ಲ್ಲಿ ಉಚಿತ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಐ.ಟಿ.ಐ., ಡಿಪ್ಲೋಮಾ ಹಾಗೂ ಪದವಿ ಶಿಕ್ಷಣ ಪೂರೈಸಿರುವ ಅಥವಾ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಕೌಶಲ್ಯ ಶಿಕ್ಷಣ ವೃಧ್ಧಿಸಲು ಬಯಸುವ ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅರ್ಹ ಅಭ್ಯರ್ಥಿಗಳು ಕಛೇರಿ ವೇಳೆಯಲ್ಲಿ ಸಂಸ್ಥೆಯನ್ನು ಸಂಪರ್ಕಿಸಿ ತಕ್ಷಣದಿಂದ ಪ್ರಾರಂಭಗೊಳ್ಳಲಿರುವ ಉಚಿತ ಕೌಶಲ್ಯ ತರಬೇತಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:0824-2211477, 8277741731 ಸಂಪರ್ಕಿಸಬಹುದು ಎಂದು ಕೆಜಿಟಿಟಿಐ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles