“ಮನಸಲಿ ಜೋರು ಕಲರವ” ಮೆಲೋಡಿ ಹಾಡು ಬಿಡುಗಡೆ
ಮ೦ಗಳೂರು: ಮೆಲೋಡಿ ಹಾಡುಗಳು ಎಂದಿಗೂ ಜನರ ಜೀವನದ ಅವಿಭಾಜ್ಯ ಅಂಗವಾಗಿರುತ್ತವೆ. ಎಲ್ಲಾ ಕಾಲದಲ್ಲೂ ಎಲ್ಲರನ್ನೂ ಆಕರ್ಷಿಸುವ ಹಲವಾರು ಮೆಲೋಡಿ ಹಾಡುಗಳ ಗುಂಪಿಗೆ "ರವಿಕೆ ಪ್ರಸಂಗ" ಚಿತ್ರದ"ಮನಸಲಿ ಜೋರು ಕಲರವ" ಎಂಬ ಅದ್ಭುತವಾದ ಮೆಲೋಡಿ ಹಾಡನ್ನು ನೂರಾರು ಎವರ್ ಗ್ರೀನ್ ಸೂಪರ್ ಹಿಟ್ ಮೆಲೋಡಿ ಹಾಡುಗಳನ್ನು ನೀಡಿರುವ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಬಿಡುಗಡೆ...
ಡಿ.22-31: ಬೇಕಲ ಇಂಟರ್ನ್ಯಾಷನಲ್ ಬೀಚ್ ಫೆಸ್ಟಿವಲ್
ಮ೦ಗಳೂರು: ಬೇಕಲ ಅಂತರಾಷ್ಟ್ರೀಯ ಬೀಚ್ ಉತ್ಸವದ 2ನೇ ಆವೃತ್ತಿಯು ಡಿ. 22 ರಿಂದ ಡಿ.31 ರವರೆಗೆ ಕಾಸರಗೋಡಿನಪಳ್ಳಿಕೆರೆ ಬೇಕಲ್ ಬೀಚ್ ಪಾರ್ಕ್‌ನಲ್ಲಿ ಬೇಕಲ್ ರೆಸಾರ್ಟ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಉದುಮ ಶಾಸಕ ಸಿ.ಎಚ್.ಕುಂಞಂಬು ನೇತೃತ್ವದ ವಿಸ್ತೃತ ಸಂಘಟನಾ ಸಮಿತಿ ನೇತೃತ್ವದಲ್ಲಿನಡೆಯಲಿದೆ.
ಬೇಕಲ ಅಂತರಾಷ್ಟ್ರೀಯ ಬೀಚ್ ಉತ್ಸವದ ಬಗ್ಗೆ ಮ೦ಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಉದುಮ...
ಆಳ್ವಾಸ್ ವಿರಾಸತ್ 2023’: ಜನಸಾಗರ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆಯ ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ 29ನೇ ವರ್ಷದ ‘ಆಳ್ವಾಸ್ ವಿರಾಸತ್ 2023’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಎರಡನೇ ದಿನವೂ ಜನಸಾಗರ:
ದಿನವೂ ಬೆಳಗ್ಗೆಯಿಂದಲೇ ಸಹಸ್ರಾರು ಮಂದಿ ವಿರಾಸತ್‌ನ ವಿವಿಧ ಮೇಳಗಳಲ್ಲಿ ಭಾಗವಹಿಸಿದರು. ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಕೃಷಿಸಿರಿ ವೇದಿಕೆ ಆವರಣದಲ್ಲಿ ಪ್ರದರ್ಶನಗೊಳ್ಳುತ್ತಿರುವ...
ಗುರುಪುರ ಕರಾವಳಿ ಜೋಡುಕರೆ ಕಂಬಳ ಉತ್ಸವದ ಲೋಗೋ ಬಿಡುಗಡೆ
ಗುರುಪುರ :ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ (ರಿ) ಗುರುಪುರ ಇದರ ಆಶ್ರಯದಲ್ಲಿ ನಡೆಯಲಿರುವ ಗುರುಪುರ ಕಂಬಳ ಉತ್ಸವ ಇದರ ಲೋಗೋ ಬಿಡುಗಡೆ ಸಮಾರಂಭವು ಮಂಗಳೂರಿನ ಬಿಜೈನಲ್ಲಿರುವ ಹೋಟೆಲ್ ಓಷಿಯನ್ ಪರ್ಲ್ ನಲ್ಲಿ ನಡೆಯಿತು.ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಇನಾಯತ್ ಆಲಿ ಬಿಡುಗಡೆಗೊಳಿಸಿದರು.ತದ ಬಳಿಕ ಮಾತನಾಡಿದ ಅವರು, ಕಂಬಳದ ಮೂಲಕ ತುಳುನಾಡಿನ ಸಂಸ್ಕೃತಿ ಎಲ್ಲಡೆ ಪಸರಿಸಲಿ ಎಂದು...
ಮೂಡುಬಿದಿರೆಯಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಸ೦ಭ್ರಮ
ಮೂಡುಬಿದಿರೆ: ಕಳೆದ 28 ವರ್ಷಗಳಿಂದ ರಾಷ್ಟ್ರ- ಅಂತರಾಷ್ಟ್ರಮಟ್ಟದ ಕಲಾವಿದರನ್ನು ಮೂಡುಬಿದಿರೆಯ ಎಂಬ ಗ್ರಾಮೀಣ ಪ್ರದೇಶಕ್ಕೆ ಕರೆಸಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾದರಪಡಿಸುವ ಮೂಲಕ ಮೂಡುಬಿದಿರೆಯ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಇದೀಗ 29 ನೇ ವರ್ಷದ ಸಡಗರಕ್ಕೆ ಸಜ್ಜಾಗಿದ್ದು ಇಂದಿನಿಂದ ನಾಲ್ಕು ದಿನಗಳ ಕಾಲ ಸಾಂಸ್ಕೃತಿಕ...
ಸಾಹಿತಿ ಮುಹಮ್ಮದ್ ಬಡ್ಡೂರ್‌ಗೆ ‘ನಂದಿ ಫಿಲ್ಮ್’ ಪ್ರಶಸ್ತಿ
ಮಂಗಳೂರು:ಬಹುಭಾಷಾ ಕವಿ, ಸಾಹಿತಿ, ಚಲನಚಿತ್ರ ನಟ ಮುಹಮ್ಮದ್ ಬಡ್ಡೂರ್ ಅವರಿಗೆ ಪ್ರತಿಷ್ಠಿತ ‘ಕರ್ನಾಟಕ ನಂದಿ ಫಿಲ್ಮ್ -2023’ ಪ್ರಶಸ್ತಿ ಲಭಿಸಿದೆ.ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮುಹಮ್ಮದ್ ಬಡ್ಡೂರು ಅವರ ಪರವಾಗಿ ಚಲನಚಿತ್ರ ನಿರ್ದೇಶಕ ಅಂಬಳಿಕೆ ರವಿ ಅವರು ‘ಕಾಂತಾರ’ ಸಿನೆಮಾದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು....
ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಕಿರು ಚಿತ್ರ ಕೇನ್ಸ್ ವಿಶ್ವ ಚಲನಚಿತ್ರೋತ್ಸವಕ್ಕೆ ಆಯ್ಕೆ
ಮ೦ಗಳೂರು" ಮ೦ಗಳೂರಿನ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಕಿರು ಚಿತ್ರ ಹೈಡ್ & ಸೀಕ್ ಪ್ರತಿಷ್ಠಿತ ಕೇನ್ಸ್ ವಿಶ್ವ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
"ಹೈಡ್ ಅಂಡ್ ಸೀಕ್" ಕಿರುಚಿತ್ರವನ್ನು ಭಾರತದ ಯುವ ನಿರ್ದೇಶಕಿ 20 ವರ್ಷ ವಯಸ್ಸಿನ ಮಿಸ್ ಕರೆನ್ ಕ್ಷಿತಿ ಸುವರ್ಣ ಅವರು ನಿರ್ದೇಶಿಸಿದ್ದಾರೆ. ಇದು ಸ್ಕಿಜೋಫ್ರೇನಿಯಾ ಮತ್ತು ಅದರ ತೀವ್ರ ಪರಿಣಾಮಗಳ ಕುರಿತು ಸಂದೇಶವನ್ನು...
ಮುಸಾಫಿರ್’ ಬ್ಯಾರಿ ಚಲನಚಿತ್ರಕ್ಕೆ ‘ನಂದಿ ಫಿಲ್ಮ್’ ಪ್ರಶಸ್ತಿ ಪ್ರದಾನ
ಮಂಗಳೂರು: ಶ್ಯಾಕ್ಸ್ ಎಂಟರ್‌ಪ್ರೈಸಸ್‌ನ ಅಬ್ದುಲ್ ಶಕೀಲ್ ನಿರ್ಮಾಣದ ಬ್ಯಾರಿ ಭಾಷೆಯ ಚಲನಚಿತ್ರ ‘ಮುಸಾಫಿರ್’ಗೆ ‘ಕರ್ನಾಟಕ ನಂದಿ ಫಿಲ್ಮ್ -2023’ ಪ್ರಶಸ್ತಿ ಲಭಿಸಿದೆ.ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ‘ಮುಸಾಫಿರ್’ ಸಿನೆಮಾದ ಮುಖ್ಯಪಾತ್ರಧಾರಿ ಮುಹಮ್ಮದ್ ಬಡ್ಡೂರು ಅವರ ಪರವಾಗಿ ಚಲನಚಿತ್ರ ನಿರ್ದೇಶಕ ಅಂಬಳಿಕೆ ರವಿ ಹಾಗೂ ‘ಮುಸಾಫಿರ್’ ಸಿನೆಮಾಕ್ಕೆ ಸಾಹಿತ್ಯ ಬರೆದ ಪತ್ರಕರ್ತ ಹಂಝ...
ಡಿ.14-17 : ಆಳ್ವಾಸ್ ವಿರಾಸತ್; ‘ಸಪ್ತ ಮೇಳ’ಗಳ ಮೆರುಗು
ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವರ್ಷದ 'ಆಳ್ವಾಸ್ ವಿರಾಸತ್ 2023' ಡಿ.14ರಿಂದ 17ರ ವರೆಗೆ ಮೂಡುಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ.ಆಳ್ವಾಸ್ ವಿರಾಸತ್-23'ಕ್ಕೆ 'ಸಪ್ತ ಮೇಳ'ಗಳ ಮೆರುಗಿನ ಜೊತೆ ವೀರಯೋದ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ...
ನನ್ನ ಕತೆಗಳು ಬರೀ ಕಾಲ್ಪನಿಕವಲ್ಲ :ಡಾ| ಪ್ರಕಾಶ್ ಪರ್ಯೆಂಕರ್
ಶಿರಸಿ:"ನಾನು ಕಾಲ್ಪನಿಕ ಕತೆಗಳನ್ನು ಬರೆಯುವುದಿಲ್ಲ. ನನ್ನ ಹೆಚ್ಚಿನ ಕತೆಗಳು ಸಮಾಜಿಕ ಅಸಮಾನತೆ, ಶೋಷಣೆಯ ಹಿನ್ನೆಲೆಯಲ್ಲೇ ಹುಟ್ಟಿಕೊಂಡಿವೆ. ನಾಗರಿಕ ಸಮಾಜದಲ್ಲಿ ಇಂದಿಗೂ ಅಸ್ಪ್ರಶ್ಯತೆಯ ಪಿಡುಗು ಚಾಲ್ತಿಯಲ್ಲಿರುವುದು ಶೋಚನೀಯ" ಎಂದು ಕಥಾಕಾರ, ಗೋವಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಪ್ರಕಾಶ್ ಪರ್ಯೆಂಕರ್ ಅಭಿಪ್ರಾಯಪಟ್ಟರು.
ಅವರು ಸಾಹಿತ್ಯ ಅಕಾಡೆಮಿ, ಹೊಸದೆಹಲಿ ಶಿರಸಿಯ ನರೇಬೈಲ್‌ನಲ್ಲಿ ಚಂದನ ಪದವಿ ಪೂರ್ವ ಕಾಲೇಜಿನ ಸಹಭಾಗಿತ್ವದೊಂದಿಗೆ ದಸೆಂಬರ...










