ಕಟ್ಟಡ ನಿರ್ಮಾಣಕ್ಕೆ ಲೈಸೆನ್ಸ್ ಕಡ್ಡಾಯ: ತಪ್ಪಿದ್ದಲ್ಲಿ ಸೌಲಭ್ಯವಿಲ್ಲ-ಮಹಾನಗರಪಾಲಿಕೆ
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸುವ ಮುನ್ನ ಕೆ.ಎಂ.ಸಿ ಕಾಯ್ದೆಯಡಿ ಕಡ್ಡಾಯವಾಗಿ ಕಟ್ಟಡ ನಿರ್ಮಾಣ ಪರವಾನಿಗೆ ಪಡೆಯಬೇಕಾಗಿರುತ್ತದೆ. ಕಟ್ಟಡ ಪರವಾನಿಗೆಯನ್ನು ಪಡೆದ ನಂತರ ಅನುಮೋದಿತ ನಕ್ಷೆಯನ್ವಯ ಕಟ್ಟಡ ನಿರ್ಮಿಸಿ ಕಟ್ಟಡ ಪ್ರವೇಶ ಪತ್ರ ಪಡೆದ ನಂತರ ಕಟ್ಟಡವನ್ನು ಉಪಯೋಗಿಸಬೇಕಾಗಿರುತ್ತದೆ.ಸುಪ್ರೀಂ ಕೋರ್ಟ್ ಆದೇಶದಂತೆ ಕಟ್ಟಡ ಪ್ರವೇಶ ಪತ್ರ ಪಡೆಯದ...
ತೆರಿಗೆ ಪಾವತಿಯಲ್ಲಿ ಜಿಲ್ಲೆಯ ಜನರ ಬದ್ಧತೆ ಶ್ಲಾಘನೀಯ: ಡಾ ಆನಂದ್
ಮ೦ಗಳೂರು: ಮನೆ ತೆರಿಗೆ ಸೇರಿದಂತೆ ಯಾವುದೇ ಸರಕಾರಿ ಪಾವತಿಗಳನ್ನು ಬಹಳ ಬದ್ಧತೆ ಮತ್ತು ಪ್ರಾಮಾಣಿಕವಾಗಿ ಪಾವತಿಸುವ ದಕ್ಷಿಣ ಕನ್ನಡ ಜಿಲ್ಲೆಯ ಜನರ ಮನೋಭಾವನೆ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯತ್ ನಿಕಟಪೂರ್ವ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಮತ್ತು ವಿಜಾಪುರ ಜಿಲ್ಲಾಧಿಕಾರಿ ಡಾ ಕೆ ಆನಂದ್ ಹೇಳಿದ್ದಾರೆ.
ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ತನಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ...
ಭಾರಿ ಮಳೆಗೆ ಹಲವೆಡೆ ಪ್ರಾಕೃತಿಕ ಅನಾಹುತಗಳು: ಶಾಸಕ ಕಾಮತ್ ಭೇಟಿ
ಮ೦ಗಳೂರು: ನಗರದೆಲ್ಲೆಡೆ ಸುರಿದ ಭಾರೀ ಮಳೆಗೆ ಹಲವೆಡೆ ಪ್ರಾಕೃತಿಕ ಅನಾಹುತಗಳು ಸಂಭವಿಸಿದ್ದು ಮಂಗಳೂರು ನಗರ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಮರೋಳಿ ವಾರ್ಡ್ ಸಂಖ್ಯೆ 37ಕ್ಕೆ ಶಾಸಕ ವೇದವ್ಯಾಸ ಕಾಮತ್ ರವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸತತ ಮಳೆಯಿಂದಾಗಿ ಅಡುಮರೋಳಿ ಶೋಭಾ ಶೆಟ್ಟಿ ಎಂಬುವವರ ಮನೆಯ ಎತ್ತರದ ಕಾಂಪೌಂಡ್ ಕುಸಿದು ಅಪಾರ ನಷ್ಟವುಂಟಾಗಿದೆ. ಅಲ್ಲದೇ...
ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ಉಚಿತ ತರಬೇತಿ
ಮಂಗಳೂರು: ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಸರಕಾರಿ ವಕೀಲರ ಅಧೀನದಲ್ಲಿ 4 ವರ್ಷಗಳ ಅವಧಿಯ ಉಚಿತ ಕಾನೂನು ತರಬೇತಿಯನ್ನು ನೀಡುವ ಕಾರ್ಯಕ್ರಮದಡಿ, ಕಾನೂನು ತರಬೇತಿ ಪಡೆಯಲು ಬಯಸುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಗೆ ಸೇರಿದ ಕಾನೂನು ಪದವೀಧರರಿಂದ 2025-26ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ.ಅಭ್ಯರ್ಥಿಯು ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿತರಾದ ಕಾನೂನು...
ಸಿಎಎಸ್’ಕೆ ಸೆಂಟಿನರಿ ಟ್ರಸ್ಟ್ : ವಿದ್ಯಾ ಸಹಾಯಧನ ವಿತರಣಾ ಸಮಾರಂಭ
ಮ೦ಗಳೂರು: ಸಿಎಎಸ್’ಕೆ ಸೆಂಟಿನರಿ ಟ್ರಸ್ಟ್ ವತಿಯಿಂದ ರೂ. 30 ಲಕ್ಷಕ್ಕೂ ಮಿಕ್ಕ ಮೌಲ್ಯದ ವಿದ್ಯಾರ್ಥಿವೇತನವನ್ನು 307 ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಸಮಾರಂಭ ಜು.19 ಶನಿವಾರ ದಂದು ಸೆಂಟ್ ಆಗ್ನೆಸ್ಕಾಲೇಜಿನ ಸೆಂಟಿನರಿ ಕಟ್ಟಡದಲ್ಲಿ ನಡೆಯಲಿದೆ.ಈ ವಿದ್ಯಾರ್ಥಿವೇತನಗಳನ್ನು ಟ್ರಸ್ಟ್ 2014 ರಿಂದ ನಿರಂತರವಾಗಿ ನೀಡುತ್ತಿದ್ದು, ಧರ್ಮ, ಭಾಷೆ, ಅಂಕಗಳುಅಥವಾ ಪ್ರತಿಭೆಗೆ ಯಾವುದೇ ಮಹತ್ವ ನೀಡದೆ, ಕೇವಲ ವಿದ್ಯಾರ್ಥಿಯ...
ತೆಕ್ಕಾರು : ಪತಿಯಿ೦ದ ಪತ್ನಿಯ ಕೊಲೆ
ಮ೦ಗಳೂರು: ಪತ್ನಿಯನ್ನು ಪತಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ತೆಕ್ಕಾರು ಗ್ರಾಮದ ಬಾಜಾರು ಎಂಬಲ್ಲಿ ಗುರುವಾರ ನಡೆದಿದೆ. ಝೀನತ್ (40) ಕೊಲೆಯಾದವರು. ರಫೀಕ್ ಕೊಲೆ ಮಾಡಿದ ಆರೋಪಿ.
ಬಾಜಾರು ಎಂಬಲ್ಲಿ ವಾಸವಿದ್ದ ಝೀನತ್ ಎಂಬವರಿಗೆ, ರಫೀಕ್ ಎಂಬಾತನೊಂದಿಗೆ ಸುಮಾರು 18 ವರ್ಷದ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿರುತ್ತಾರೆ. ದಂಪತಿಗಳಿಗೆ ಕಳೆದ ಕೆಲವು...
ಕೊಕ್ಕಡ : ಕಾಡಾನೆ ದಾಳಿಯಿಂದ ಓರ್ವ ಮೃತ್ಯು
ಮ೦ಗಳೂರು: ಬೆಳ್ತಂಗಡಿ ಕೊಕ್ಕಡ ಗ್ರಾಮದ ಸೌತಡ್ಕ ಗುಂಡಿ ಎಂಬಲ್ಲಿ ಕಾಡಾನೆ ದಾಳಿಯಿಂದ ಓರ್ವ ಮೃತಪಟ್ಟ ಘಟನೆ ಗುರುವಾರ ಸ೦ಭವಿಸಿದೆ.ಸೌತಡ್ಕ ನಿವಾಸಿ ಬಾಲಕೃಷ್ಣ (60) ಮೃತಪಟ್ಟವರು.
ಗುರುವಾರ ಬೆಳಗ್ಗೆ ಸುಮಾರು 11 ರಿಂದ 12 ಗಂಟೆಯ ಅವಧಿಯಲ್ಲಿ ಗೇರು ಪ್ಲಾ೦ಟೇಶನ್ ಬಳಿ ಬಾಲಕೃಷ್ಣ ಅವರ ಮೇಲೆ ಕಾಡಾನೆ ದಾಳಿ ನಡೆಸಿದೆ. ಮೃತದೇಹವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು,...
ತೀವ್ರ ಮಳೆ : ಜಿಲ್ಲಾಧಿಕಾರಿ ಭೇಟಿ
ಮಂಗಳೂರು: ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಹಲವು ಕಡೆ ಗುಡ್ಡ ಜರಿತ, ನೆರೆ, ಮನೆ ಕುಸಿತ ಮತ್ತಿತರ ಘಟನೆಗಳು ನಡೆದಿರುವ ಸ್ಥಳಗಳಿಗೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರು ಗುರುವಾರ ಭೇಟಿ ನೀಡಿದರು.ನಗರದ ಸಕ್ಯೂ೯ಟ್ ಹೌಸ್ ಪಕ್ಕದ ಮುಖ್ಯರಸ್ತೆಯಲ್ಲಿ ಗುಡ್ಡ ಕುಸಿತ ಸಂಭವಿಸಿದ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬುಧವಾರ ಮಧ್ಯರಾತ್ರಿ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ನಗರದ ವಿವಿಧ...
ಜುಲೈ 23 : ಮಂಗಳೂರಿನಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ
ಮಂಗಳೂರು: ಲೋಕಾಯುಕ್ತ ಜನಸಂಪರ್ಕ ಸಭೆ ಜುಲೈ 23 ರಂದು ಬೆಳಿಗ್ಗೆ 11 ಗಂಟೆಯಿಂದ ಮಂಗಳೂರು ತಾಲೂಕು ಕಛೇರಿಯಲ್ಲಿ ಆಯೋಜಿಸಲಾಗಿದೆ.ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಜುಲೈ 23 ರಂದು ಭೇಟಿ ನೀಡಿ, ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿ, ಅಫಿದಾವಿತ್ ಮಾಡಿಸಿದ...
ಕೇಂದ್ರ ಸರಕಾರ ಕಚೇರಿಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಂಗಳೂರು: ಕೇಂದ್ರ ಸರಕಾರದ ಸ್ಟಾಪ್ ಸೆಲೆಕ್ಷನ್ ಕಮಿಷನ್ ವತಿಯಿಂದ 3131 ಹುದ್ದೆಗಳ ನೇಮಕಾತಿಗಾಗಿ ಕಂಬೈನ್ಸ್ ಹೈಯರ್ ಸೆಕೆಂಡರಿ (10+2) ಲೆವೆಲ್ ಎಕ್ಸಾಮಿನೇಷನ್ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸುತ್ತಿದ್ದು, ಈ ನೇಮಕಾತಿಯಲ್ಲಿ ಲೋವರ್ ಡಿವಿಷನ್ ಕ್ಲರ್ಕ್/ಜೂನಿಯರ್ ಸೆಕ್ರೇಟರಿಯೇಟ್ ಅಸಿಸ್ಟಂಟ್, ಡಾಟಾ ಎಂಟ್ರಿ ಆಪರೇಟರ್, ಡಾಟಾ ಎಂಟ್ರಿ ಆಪರೇಟರ್ (ಗ್ರೇಡ್-ಎ) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ನೇಮಕಾತಿಯ ವಿವರಗಳು:-...



