24.5 C
Karnataka
Thursday, April 30, 2026

ಸಿಎಎಸ್’ಕೆ ಸೆಂಟಿನರಿ ಟ್ರಸ್ಟ್ : ವಿದ್ಯಾ ಸಹಾಯಧನ ವಿತರಣಾ ಸಮಾರಂಭ

ಮ೦ಗಳೂರು: ಸಿಎಎಸ್’ಕೆ ಸೆಂಟಿನರಿ ಟ್ರಸ್ಟ್ ವತಿಯಿಂದ ರೂ. 30 ಲಕ್ಷಕ್ಕೂ ಮಿಕ್ಕ ಮೌಲ್ಯದ ವಿದ್ಯಾರ್ಥಿವೇತನವನ್ನು 307 ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಸಮಾರಂಭ ಜು.19 ಶನಿವಾರ ದಂದು ಸೆಂಟ್ ಆಗ್ನೆಸ್
ಕಾಲೇಜಿನ ಸೆಂಟಿನರಿ ಕಟ್ಟಡದಲ್ಲಿ ನಡೆಯಲಿದೆ.
ಈ ವಿದ್ಯಾರ್ಥಿವೇತನಗಳನ್ನು ಟ್ರಸ್ಟ್ 2014 ರಿಂದ ನಿರಂತರವಾಗಿ ನೀಡುತ್ತಿದ್ದು, ಧರ್ಮ, ಭಾಷೆ, ಅಂಕಗಳುಅಥವಾ ಪ್ರತಿಭೆಗೆ ಯಾವುದೇ ಮಹತ್ವ ನೀಡದೆ, ಕೇವಲ ವಿದ್ಯಾರ್ಥಿಯ ಆರ್ಥಿಕ ಪರಿಸ್ಥಿತಿಯನ್ನು ಮಾತ್ರ ಪರಿಗಣಿಸಿ, ಆರ್ಥಿಕವಾಗಿ ಕಷ್ಟದಲ್ಲಿರುವ ಅಥವಾ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ.
ಕಾರ್ಯಕ್ರಮಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ಪೀಟರ್ ಪೌಲ್ ಸಲ್ದಾನ್ಹಾ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಎನ್‌ಆರ್‌ಐ ದಾನಿ ಮೈಕೆಲ್ ಡಿಸೋಜಾ ಮತ್ತು ರೋಹನ್
ಕಾರ್ಪೊರೇಶನ್ ಅಧ್ಯಕ್ಷ ಡಾ. ರೋಹನ್ ಮೊಂತೇರೊ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ವಿದ್ಯಾರ್ಥಿಗಳು, ಅವರ ಪಾಲಕರು ಹಾಗೂ ಟ್ರಸ್ಟ್‌ನ ದಾನಿಗಳು ಮತ್ತು ಸಹಾಯಧಾರಕರು ಪಾಲ್ಗೊಳ್ಳಲಿದ್ದಾರೆ.
2

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles