24.5 C
Karnataka
Thursday, April 30, 2026

ತೆಕ್ಕಾರು : ಪತಿಯಿ೦ದ ಪತ್ನಿಯ ಕೊಲೆ

ಮ೦ಗಳೂರು: ಪತ್ನಿಯನ್ನು ಪತಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ತೆಕ್ಕಾರು ಗ್ರಾಮದ ಬಾಜಾರು ಎಂಬಲ್ಲಿ ಗುರುವಾರ ನಡೆದಿದೆ. ಝೀನತ್ (40) ಕೊಲೆಯಾದವರು. ರಫೀಕ್ ಕೊಲೆ ಮಾಡಿದ ಆರೋಪಿ.

ಬಾಜಾರು ಎಂಬಲ್ಲಿ ವಾಸವಿದ್ದ ಝೀನತ್ ಎಂಬವರಿಗೆ, ರಫೀಕ್ ಎಂಬಾತನೊಂದಿಗೆ ಸುಮಾರು 18 ವರ್ಷದ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿರುತ್ತಾರೆ. ದಂಪತಿಗಳಿಗೆ ಕಳೆದ ಕೆಲವು ತಿಂಗಳುಗಳಿಂದ ವೈಮನಸ್ಸು ಉಂಟಾಗಿ ಕೌಟುಂಬಿಕ ಕಲಹ ನಡೆಯುತ್ತಿತ್ತು. ಗುರುವಾರ ಬೆಳಗ್ಗೆ ಕೌಟುಂಬಿಕ ಕಲಹ ನಡೆದಾಗ ಆರೋಪಿ ರಫೀಕ್ ಪತ್ನಿ ಝೀನತ್ ಅವರ ಮೇಲೆ ಚಾಕುವಿನಿಂದ ತೀವ್ರವಾಗಿ ಹಲ್ಲೆ ನಡೆಸಿರುತ್ತಾನೆ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಝೀನತ್ ಅವರನ್ನು ಸ್ಥಳೀಯರು ಹಾಗೂ ಸಂಬಂಧಿಕರು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ವಿಚಾರಣೆ ನಡೆಸಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles