30.3 C
Karnataka
Sunday, September 13, 2026

ಸುದ್ದಿ

ಮಾ. 7 ರಂದು ಗ್ಯಾರಂಟಿ ಸಮಾವೇಶ

0
ಮಂಗಳೂರು: ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹಾಗೂ ಜಿಲ್ಲೆಯ ಪ್ರತಿ ಅರ್ಹ ಪಲಾನುಭವಿಗೆ ಈ ಯೋಜನೆಗಳ ಸೌಲಭ್ಯವನ್ನು ಪರಿಣಾಮಕಾರಿಯಾಗಿ ತಲುಪಿಸಲು ಪ್ರತಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶವನ್ನು ಆಯೋಜಿಸಲಾಗಿದೆ. ಮಂಗಳೂರು ತಾಲೂಕಿನಲ್ಲಿ ಮಾ. 7 ರಂದು ಗುರುವಾರ ಸಂಜೆ 4.30ಕ್ಕೆ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಗ್ಯಾರಂಟಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು...

ರಾಷ್ಟ್ರೀಯ ಲೋಕ ಅದಾಲತ್ ಮುಂದೂಡಿಕೆ

0
ಮಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇದೇ ಮಾರ್ಚ್ 9 ರಂದು ಶನಿವಾರ ನಡೆಯಬೇಕಿದ್ದ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಮಾರ್ಚ್ 16 ರ ಶನಿವಾರಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳಿಂದ ಚೆಕ್ ಪೋಸ್ಟ್ ಪರಿಶೀಲನೆ

0
ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಮಂಗಳೂರು ನಗರ ಪೆÇಲೀಸ್ ಆಯುಕ್ತ ಅನುಪಮ ಅಗರ್ವಾಲ್ ಸೇರಿದಂತೆ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾ.6ರ೦ದು ತಲಪಾಡಿ, ದೇವಿನಗರ, ಮುಡಿಪುಗಳಲ್ಲಿ ರಚಿಸಲಾದ ಚೆಕ್ ಪೋಸ್ಟ್ ಗಳಲ್ಲಿ ತಪಾಸಣಾ ಕಾರ್ಯವನ್ನು ಪರಿಶೀಲಿಸಿದರು.

ಕುಡಿಯುವ ನೀರಿನ ಸಮಸ್ಯೆಗೆ ಸಹಾಯವಾಣಿ

0
ಮಂಗಳೂರು,: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 2024ನೇ ಸಾಲಿನ ಬೇಸಿಗೆಯಲ್ಲಿ ಸಂಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆ, ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಅನ್ವಯವಾಗುವಂತೆ ಸಹಾಯವಾಣಿ ತೆರೆಯಲಾಗಿದೆ. ಸಾರ್ವಜನಿಕರು ದೂರವಾಣಿ ಸಂಖ್ಯೆ: 0824-2951583 ಅಥವಾ ಮೊಬೈಲ್ ಸಂಖ್ಯೆ: 7204653395 ಸಂಪರ್ಕಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎನ್ ಐಟಿಕೆ : ಎಸ್ ಡಿಎಎಎಂಸಿಐ ಕುರಿತು ಕಾರ್ಯಾಗಾರ

0
ಮಂಗಳೂರು, ಮಾ.6: ಸುರತ್ಕಲ್ ನ ಎನ್ ಐಟಿಕೆ ಮೈನಿಂಗ್ ಇಂಜಿನಿಯರಿಂಗ್ ವಿಭಾಗವು "ಸೇಫ್ಟಿ ಡಾಟಾ ಅನಾಲಿಟಿಕ್ಸ್, ಅಪ್ಲಿಕೇಷನ್ಸ್ ಇನ್ ಮೈನಿಂಗ್ ಮತ್ತು ಇತರ ಕೋರ್ ಇಂಡಸ್ಟ್ರೀಸ್ (ಎಸ್ ಡಿಎಎಎಂಸಿಐ) 2024" ಎಂಬ ಒಂದು ವಾರದ ಕಾರ್ಯಾಗಾರವನ್ನು ಆಯೋಜಿಸಿದ್ದು ಕಾರ್ಯಾಗಾರವು ಮಾ. 6ರಿ೦ದ ಮಾ. 12 ರವರೆಗೆ ನಡೆಯಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್ಟಿ)...

ಮಂಗಳೂರು ವಿವಿ: ಬೋಧಕರ ಪುನಶ್ಚೇತನಾ ಕಾರ್ಯಾಗಾರ ಮುಕ್ತಾಯ

0
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ವಿಭಾಗದಲ್ಲಿ, ಎ.ಐ.ಸಿ.ಟಿ.ಇ. - ಎ.ಟಿ.ಎ.ಎಲ್ಸ ಹಯೋಗದೊಂದಿಗೆ ಆಯೋಜಿಸಲಾದ, ಒಂದು ವಾರದ ಎಲಿವೇಟಿಂಗ್ ಹೆಲ್ತ್ ಕೇರ್ ಥ್ರೂ ಡೀಪ್ಲ ರ್ನಿಂಗ್ : ಇನ್ನೋವೇಶನ್ಸ್ ಇನ್ ಮೆಡಿಕಲ್ ಇಮೇಜ್ ಪ್ರೊಸೆಸಿಂಗ್ ಎಂಬ ಬೋಧಕರ ಪುನಶ್ಚೇತನಾ ಕಾರ್ಯಾಗಾರದ ಸಮಾರೋಪ ಸಮಾರಂಭ ಐ.ಬಿ.ಎಂ. ಸೆಂಟರ್ ಆಫ್ ಎಕ್ಸಲೆನ್ಸ್ ಹಾಲ್ ನಲ್ಲಿ ಇತ್ತೀಚೆಗೆನಡೆಯಿತು.ಮುಖ್ಯ...

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ವಿಡಿಯೋ ಸಂವಾದ,ಶುಭಹಾರೈಕೆ

0
ಮಂಗಳೂರು: ಮಾರ್ಚ್ 25 ರಿಂದ ಏಪ್ರಿಲ್ 6ರ ವರೆಗೆ ರಾಜ್ಯದ್ಯಂತ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಶೇ. ನೂರರಷ್ಟು ಶ್ರಮವಹಿಸಿ ಓದುವ ಮೂಲಕ ಹೆಚ್ಚು ಅಂಕಗಳಿಸಿ ಚಾಂಪಿಯನ್ ಗಳಾಗುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕರೆ ನೀಡಿದರು. ಅವರು ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ...

ಗೇರುಮೇಳ ಮತ್ತು ವಿಚಾರ ಸಂಕಿರಣ

0
ಮಂಗಳೂರು: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಉಳ್ಳಾಲದ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೊಚ್ಚಿನ್‍ನ ಗೇರು ಮತ್ತು ಕೊಕೋ ಅಭಿವೃದ್ಧಿ ನಿರ್ದೇಶನಾಲಯ, ಹಾಗೂ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ,...

ಮಾ.10-15 ಅಳಪೆ ಶ್ರೀ ಮುಂಡಿತ್ತಾಯ ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

0
ಮಂಗಳೂರು: "ಅಳಪೆ ಕಣ್ಣೂರಿನಲ್ಲಿರುವ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಮುಂಡಿತ್ತಾಯ ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವವು ಮಾ. 10ರಿಂದ 15ರವರೆಗೆ ವಿಜೃಂಭಣೆಯಿಂದ ಜರುಗಲಿದೆ" ಎಂದು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾಧ್ಯಮಗಳಿಗೆ ಮಾಹಿತಿ ನೀಡಿದರು."ದೈವಸ್ಥಾನಕ್ಕೆ 850 ವರ್ಷಗಳ ಇತಿಹಾಸವಿದ್ದು ಭಕ್ತರ ಸಹಕಾರದೊಂದಿಗೆ ಭಂಡಾರ ಮನೆ, ದೈವದ...

ಮಹಿಳೆಯರಿಗೆ ತಮ್ಮ ಹಕ್ಕುಗಳ ಬಗ್ಗೆ ಸೌಲಭ್ಯಗಳ ಬಗ್ಗೆ ಅರಿವಿರಬೇಕು: ಡಾ. ನಾಗಲಕ್ಷ್ಮೀ ಚೌಧರಿ

0
ಮಂಗಳೂರು: ಹೆಣ್ಣು ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದೇ ನನ್ನ ಗುರಿ, ಹೆಣ್ಣು ಅಬಲೆಯಲ್ಲ ಸಬಲೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಹೇಳಿದರು.ಅವರು ಮಾ.5 ರಂದು ಮಂಗಳವಾರ ನಗರದ ಲೇಡಿಘೋಷನ್ ಆಸ್ವತ್ರೆಯಲ್ಲಿನ ಸಖಿ ಒನ್ ಸ್ಟಾಪ್ ಸೆಂಟರ್‍ನಲ್ಲಿ ಮಾತನಾಡಿದರು. ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳಿಗೆ...