ಮಂಗಳೂರು : ನಿಟ್ಟೆ ಪರಿಗಣಿತ ವಿ.ವಿ. ದೇರಳಕಟ್ಟೆ ಇದರ ಅಂಗ ಸಂಸ್ಥೆಯಾದ ನಿಟ್ಟೆ ಉಷಾ ಇನ್ಸ್‌ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್‌ನ ಸಮುದಾಯ ಆರೋಗ್ಯ ನರ್ಸಿಂಗ್ ವಿಭಾಗದ ವತಿಯಿಂದ ಸಮುದಾಯ ಆಧಾರಿತ ವಿಪತ್ತು ನಿರ್ವಹಣೆ ಕುರಿತು ಕಾರ್ಯಾಗಾರ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿದ ನಿಟ್ಟೆ ಪರಿಗಣಿತ ವಿ.ವಿ.ಯ ಎನ್‌ಎಸ್‌ಎಸ್ ಸಂಯೋಜಕ ಶಶಿಕುಮಾರ್ ಶೆಟ್ಟಿ ಮಾತನಾಡಿ ‘ಯುವಜನರು ಮತ್ತು ಎನ್‌ಎಸ್‌ಎಸ್ ಸ್ವಯಂಸೇವಕರು ಸಮುದಾಯ ಸೇವೆ ಹಾಗೂ ವಿಪತ್ತು ನಿರ್ವಹಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿಭಾಗವಹಿಸಬೇಕು .ಪರಿಣಾಮಕಾರಿ ವಿಪತ್ತು ನಿರ್ವಹಣೆ ಗ್ರಾಮೀಣ ಮಟ್ಟದಿಂದಲೇ ಆರಂಭವಾಗಬೇಕು. ವಿವಿಧ ವಿಭಾಗಗಳ ಸಮನ್ವಯ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಸರ್ಂಟನಾ ಅಧ್ಯಕ್ಷೆ ಡಾ. ನೀತಾ ಕಾಮತ್ ಅವರು ಕಾರ್ಯಾಗಾರದ ಉದ್ದೇಶ ವಿವರಿಸಿದರು.ಸಂಪನ್ಮೂಲ ವ್ಯಕ್ತಿಗಳಾದ ಡಾ. ಸರಿತಾ ಟೆಲ್ಮಾ ಫರ್ನಾಂಡಿಸ್, ಡಾ.ವರ್ಷಾ ಶೆಟ್ಟಿ, ಡಾ. ದಶರಥ ಅಂಗಡಿ ಮತ್ತು ಡಾ. ಶ್ರುತಿ ಅವರು
ಸಮುದಾಯ ಆಧಾರಿತ ವಿಪತ್ತು ನಿರ್ವಹಣೆಯ ಸಿದ್ಧತೆ, ಪ್ರತಿಕ್ರಿಯೆ ಹಾಗೂ ಪುನರ್ವಸತಿ ಕುರಿತುಉಪನ್ಯಾಸ ನೀಡಿದರು. ಡಾ. ಸುಚಿತ್ರಾ ಬಿ.ಎಸ್ . ಕಾರ್ಯಕ್ರಮ ನಿರೂಪಿಸಿದರು.


