24.5 C
Karnataka
Thursday, April 30, 2026

ವೈಯಕ್ತಿಕ ಸಮಸ್ಯೆಗಳನ್ನು ಪೂಜೆ ಮಾಡಿ ಪರಿಹರಿಸುವುದಾಗಿ ನ೦ಬಿಸಿ 24.78 ಲಕ್ಷ ರೂ. ವ೦ಚನೆ

ಮ೦ಗಳೂರು: ಸಾರ್ವಜನಿಕರಿಗೆ ವೈಯಕ್ತಿಕ ಸಮಸ್ಯೆಗಳನ್ನು ಪೂಜೆ ಮಾಡಿ ತತ್‌ಕ್ಷಣದಲ್ಲಿ ಪರಿಹರಿಸುವುದಾಗಿ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಜಾಹೀರಾತು ನೀಡಿ, ವ್ಯಕ್ತಿಯೊಬ್ಬರಿಗೆ ಸುಮಾರು 24,78,274/- ರೂ ವಂಚನೆ ನಡೆಸಿದ ವ್ಯಕ್ತಿಯನ್ನು ಸೈಬರ್‌ ಅಪರಾಧ ಪೊಲೀಸರು ಬ೦ಧಿಸಿದ್ದಾರೆ.

ಮೂಲತ ಬೆಂಗಳೂರು ಯಶವಂತಪುರ 1st ಹಂತದ ನಿವಾಸಿ, ಪ್ರಸ್ತುತ ಸುಂಕದಕಟ್ಟೆ ಶ್ರೀನಿವಾಸ ನಗರದಲ್ಲಿ ವಾಸವಿರುವ ವಾಸುದೇವ ಆರ್‌ (32) ಬ೦ಧಿತ ಆರೋಪಿ.
ವಂಚನೆ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ಕೈಗೆತ್ತಿಕೊ೦ಡಿದ್ದ ಪೊಲೀಸರು ಆರೋಪಿ ವಾಸುದೇವನನ್ನು ನ.4 ರಂದು ದಸ್ತಗಿರಿ ಮಾಡಿ, ಆತನಿಂದ ಕೃತ್ಯಕ್ಕೆ ಬಳಸಿದ 4 ಮೊಬೈಲ್‌ ಫೋನ್‌ಗಳು ಹಾಗೂ 20,300 ರೂ. ನಗದು ಹಣವನ್ನು ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ 1,60,300/- ಆಗಿರುತ್ತದೆ.

ಆರೋಪಿಯನ್ನು ನ.5 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿರುತ್ತಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles