24.8 C
Karnataka
Thursday, April 30, 2026

ಉದ್ಯೋಗವಕಾಶ: ನೇರ ಸಂದರ್ಶನ

ಮಂಗಳೂರು: ಸ್ವಿಗ್ಗಿ ಇನ್‍ಸ್ಟಾ ಮಾರ್ಟ್ ಕಂಪೆನಿಯ ವತಿಯಿಂದ ಮಂಗಳೂರಿನಲ್ಲಿ ಖಾಲಿಯಿರುವ ಇನ್ ಸೈಡ್ ಸ್ಟೋರ್ ಕೆಲಸಗಳಿಗಾಗಿ ಪಿಕ್ಕರ್ ಮತ್ತು ಪ್ಯಾಕರ್ ಹಾಗೂ ಲೋಡಿಂಗ್ ಹುದ್ದೆಗಳಿಗೆ ಪಾರ್ಟ್ ಟೈಮ್ ಹಾಗೂ ಫುಲ್ ಟೈಮ್ ಉದ್ಯೋಗದ ಅವಕಾಶ ಲಭ್ಯವಿದ್ದು, ಈ ಸಂಬಂಧ ಸ್ವಿಗ್ಗಿ ಇನ್‍ಸ್ಟಾ ಮಾರ್ಟ್ ಕಂಪೆನಿಯ ವತಿಯಿಂದ ನೇರ ಸಂದರ್ಶನವನ್ನು ಎಪ್ರಿಲ್ 2 ರ೦ದು ಬೆಳಿಗ್ಗೆ 10:30 ರಿಂದ 1:30 ರವರೆಗೆ ಪಾಂಡೇಶ್ವರ ಫಾರಮ್ ಫಿಜಾಮಾಲ್ ಎದುರುಗಡೆ ಇರುವ ಆದಾಯ ತೆರಿಗೆ ಕಚೇರಿ ಕಟ್ಟಡದ ಸ್ವಿಗ್ಗಿ ಇನ್‍ಸ್ಟಾ ಮಾರ್ಟ್‍ನಲ್ಲಿ ಆಯೋಜಿಸಲಾಗಿದೆ.
ಸಂದರ್ಶನದಲ್ಲಿ ಎಸ್.ಎಸ್.ಎಲ್.ಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು ವೇತನದೊಂದಿಗೆ ಫಿ.ಎಫ್. ಇ.ಎಸ್.ಐ ಮತ್ತು ಇನ್ಸೆಂಟಿವ್ ಸೌಲಭ್ಯವಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles