24.5 C
Karnataka
Thursday, April 30, 2026

ಸಾಲ ಕೊಡಿಸುವುದಾಗಿ ನಂಬಿಸಿ 3 ತಿಂಗಳಲ್ಲಿ 32 ಕೋಟಿ ರೂ. ಪಡೆದಿದ್ದ ಬಹುಕೋಟಿ ವ೦ಚಕ ರೋಶನ್ ಸಲ್ಡಾನ

ಮ೦ಗಳೂರು: ಬಹುಕೋಟಿ ವ೦ಚಕ ರೋಶನ್ ಸಲ್ಡಾನ (43 ) ಇತರರ ಜತೆ ಸೇರಿ ಕಳೆದ 3 ತಿಂಗಳಲ್ಲಿ 32 ಕೋಟಿ ರೂ.ಗಳನ್ನು ಪಡೆದುಕೊಂಡಿರುವುದು ಪೊಲೀಸ್ ಪರಿಶೀಲನೆ ವೇಳೆ ಕ೦ಡುಬ೦ದಿದೆ.

ಮಂಗಳೂರು ಬಜಾಲ್ ಬೊಲ್ಲಗುಡ್ಡದಲ್ಲಿ ಭವ್ಯ ಬ೦ಗಲೆ ನಿಮಿ೯ಸಿಕೊ೦ಡು ವಾಸಿಸುತ್ತಿದ್ದ ರೋಶನ್ ಸಲ್ಡಾನ(43 ) ಮೇಲೆ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿ ಗುರುವಾರ ಮನೆಯಲ್ಲಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡು ಪೊಲೀಸರು ದಾಳಿ ನಡೆಸಿದ್ದು ಮನೆಯ ಅಡಗುತಾಣದಲ್ಲಿ ಪತ್ತೆಯಾಗಿದ್ದ. ಅಲ್ಲಿ೦ದ ಆತನನ್ನು ವಶಕ್ಕೆ ಪಡೆದು ಬ೦ಧಿಸಲಾಯಿತು.

ಆರೋಪಿ ವಿರುದ್ದ ಚಿತ್ರದುರ್ಗ, ಮುಂಬೈ ಸೇರಿದಂತೆ ವಿವಿಧೆಡೆ ವಂಚನೆ ಪ್ರಕರಣಗಳು ದಾಖಲಾಗಿರುತ್ತವೆ.ಇತರರೊಂದಿಗೆ ಸೇರಿ ಅವಶ್ಯಕತೆ ಇರುವ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ. ಕಳೆದ 3 ತಿಂಗಳಲ್ಲಿ ಆರೋಪಿಯ ವ್ಯವಹಾರ ಪರಿಶೀಲಿಸಿದಾಗ ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕಲ್ಕತ್ತಾ, ಸಾಂಗ್ಲಿ, ಲಕ್ನೋ ,ಬಾಗಲಕೋಟೆ ಇತ್ಯಾದಿ ಕಡೆಗಳಲ್ಲಿ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಸುಮಾರು 32 ಕೋಟಿ ರೂಗಳನ್ನು ಆರೋಪಿ ಮತ್ತು ಇತರರು ಪಡೆದುಕೊಂಡಿರುವುದು ಕಂಡುಬಂದಿರುತ್ತದೆ. ಆರೋಪಿಯು ಹಲವಾರು ಮ೦ದಿಗೆ ಸುಮಾರು 2೦೦ ಕೋ.ರೂ.ಗೂ ಅಧಿಕ ವ೦ಚನೆ ನಡೆಸಿದ್ದಾನೆ ಎನ್ನಲಾಗಿದೆ.

ರೋಶನ್ ಸಲ್ಡಾನನ ಮನೆಯಲ್ಲಿ ಪೊಲೀಸರು ನಡೆಸಿದ ದಾಳಿಯ ವೇಳೆ 2.75 ಕೋ. ಮೌಲ್ಯದ ವಜ್ರದ ಉಂಗುರ, 667 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ. ಆರೋಪಿ ತನ್ನ ಮನೆಯಲ್ಲಿ ವಿನ್ಯಾಸಗೊಳಿಸಿದ್ದ ಮಿನಿಬಾರ್‌ ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6,72,947 ರೂ ಮೌಲ್ಯದ ದೇಶಿ ಮತ್ತು ವಿದೇಶಿ ಮದ್ಯ ದೊರೆಕಿದೆ . ಮದ್ಯವನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ಅಬಕಾರಿ ಕಾಯ್ದೆಯಂತೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles