ಮಹಾನಗರ ಪಾಲಿಕೆ: ಲೋಕಾಯುಕ್ತದಿ೦ದ ಪರಿಶೀಲನೆ, ಹಲವಾರು ನ್ಯೂನ್ಯತೆಗಳು ಪತ್ತೆ
ಮ೦ಗಳೂರು: ಮಂಗಳೂರು ಲೋಕಾಯುಕ್ತ ಪೊಲೀಸರು ಮಂಗಳೂರು ಮಹಾನಗರ ಪಾಲಿಕೆಗೆ ಜೂ.21 ರಂದು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಶೀಲನೆ ವೇಳೆ ಪಾಲಿಕೆಯ ಕಂದಾಯ ವಿಭಾಗ, ಆರೋಗ್ಯ ವಿಭಾಗ, ಎಂಜಿನಿಯರ್ ವಿಭಾಗ, ಲೆಕ್ಕ ಪತ್ರ ವಿಭಾಗ. ನಗರ ಯೋಜನಾ ವಿಭಾಗ, ಆಯುಕ್ತರ ಕಚೇರಿಯಲ್ಲಿ ಕಡತ ವಿಲೇವಾರಿಯಲ್ಲಿ ಹಲವಾರು ನ್ಯೂನ್ಯತೆಗಳು ಕಂಡುಬಂದಿದೆ.
ಮಂಗಳೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರಾದ...
ಜೂನ್ 24 : ವನಮಹೋತ್ಸವ ಕಾರ್ಯಕ್ರಮ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಅರಣ್ಯ ಇಲಾಖೆ ಮಂಗಳೂರು ವಲಯ ಇವರ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮ ಜೂನ್ 24 ರಂದು ಬೆಳಿಗ್ಗೆ 9.30 ಗಂಟೆಗೆ ಸುರತ್ಕಲ್ ಕುಳಾಯಿ ಎಸ್ ಟಿ ಪಿ ಪ್ಲಾಂಟ್ ಬಳಿ ನಡೆಯಲಿದೆ.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸುವರ್ಣi ಸಂಭ್ರಮ ಕಾರ್ಯಕ್ರಮ...
ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ವಲಯ ನಿಯಮಾವಳಿ ರಚಿಸಲು ಪ್ರಸ್ತಾವನೆ ಸಲ್ಲಿಕೆ
ಮ೦ಗಳೂರು: ದ. ಕ. ಮತ್ತು ಉಡುಪಿ ಜಿಲ್ಲೆ ಗಳ ನಗರಾಭಿವೃದ್ಧಿಪ್ರಾಧಿಕಾರಗಳ ಒಕ್ಕೂಟ ದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ನೇತೃತ್ವದ ನಿಯೋಗ ನಗರ ಮತ್ತು ಗ್ರಾಮಾoತರ ಯೋಜನೆ ಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ಡಾ. ಪಂಕಜ ಎಂ. ಎಸ್ ರವರನ್ನು ಭೇಟಿಯಾಗಿ ಸಮಸ್ಯೆಗಳ ಮತ್ತು ಬೇಡಿಕೆಯ ಮನವಿ ಸಲ್ಲಿಸಿ ವಿಸ್ತ್ರತ ವಾಗಿ ಚರ್ಚಿಸಲಾಯಿತುಭಿನ್ನವಾದ ಬೌಗೋಳಿಕ...
ಉದ್ಯೋಗಾಕಾಂಕ್ಷಿಗಳಿಗಾಗಿ ಕೌಶಲ್ಯ ಅಭಿವೃದ್ಧಿ ಕೇಂದ್ರ : ಝಕರಿಯಾ ಜೋಕಟ್ಟೆ
ಮಂಗಳೂರು : ಕಷ್ಟದ ದಿನಗಳು ಸಂಯಮ ಕಲಿಸಿವೆ. ಬಡತನವೇ ಸಾಧನೆಗೆ ಸ್ಪೂರ್ತಿಯಾಗಿದೆ. ಸಂಪತ್ತು ಕೈಯಲ್ಲಿದ್ದಾಗ ದಾನ ಮಾಡಿದರೆ ಕೆಟ್ಟವರಾಗುವುದಿಲ್ಲ. ಮೂರು ದಿನದ ಬದುಕಲ್ಲಿ ಎಲ್ಲರೊಡನೆ ಆತ್ಮೀಯವಾಗಿ ಕಳೆಯಬೇಕು ಎಂದು ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಝಕರಿಯಾ ಜೋಕಟ್ಟೆ ಹೇಳಿದರು.ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಮಂಗಳೂರು ಪ್ರೆಸ್ ಕ್ಲಬ್...
ಕೆನರಾ ಬ್ಯಾಂಕ್ ನಲ್ಲಿ ವಿಶ್ವ ಯೋಗ ದಿನಾಚರಣೆ
ಮಂಗಳೂರು, ನಗರದ ಕೆನರಾ ಬ್ಯಾಂಕ್ ವೃತ್ತ ಕಚೇರಿಯಲ್ಲಿ ವಿಶ್ವ ಯೋಗ ದಿನಾಚರಣೆ ಆಯೋಜಿಸಲಾಗಿತ್ತು. ಬ್ಯಾಂಕ್ ಮಹಾ ಪ್ರಬಂಧಕ ಮಂಜುನಾಥ್ ಸಿಂಘಯ್ ಮುಖ್ಯ ಅತಿಥಿ ಯಾಗಿದ್ದರು.ಬಳಿಕ ಮಾತನಾಡಿದ ಅವರು,ಯೋಗ ಅಭ್ಯಾಸದ ಮೂಲಕ ಉತ್ತಮ ಅರೋಗ್ಯ ಕಾಪಾಡಿ ಕೊಳ್ಳಬಹುದಾಗಿದೆ. ಮಾನಸಿಕ ಹಾಗೂ ದೈಹಿಕ ಅರೋಗ್ಯಕ್ಕೂ ಇದು ಸಹಕಾರಿ ಆಗಲಿದೆ ಎಂದು ಹೇಳಿದರು.ಬ್ಯಾಂಕ್ ಡಿಜಿಎಂ ಶೈಲೆಂದ್ರ ನಾಥ್ ಶೀತ್,...
ಶ್ರೀದೇವಿ ಯೋಗ ಸೆಂಟರ್:ಯೋಗ ಸಂಭ್ರಮ
ಮ೦ಗಳೂರು: ಮಂಗಳಾದೇವಿ ದೇವಸ್ಥಾನದ ಸಮೀಪದ ಶ್ರೀದೇವಿ ಯೋಗ ಸೆಂಟರ್‌ನಲ್ಲಿ ಯೋಗ ಸಂಭ್ರಮ ಶನಿವಾರ ನಡೆಯಿತು. ಶೈಲಜಾ ಸೂರಜ್ ಗಟ್ಟಿ ಯೋಗ ಮಾರ್ಗದರ್ಶನ ಮಾಡಿದರು. ರೇಖಾ, ಮಾಲ, ಪಾವನ, ವಿದ್ಯಾ, ನಮಿತಾ, ವಿನಯ, ವಿಜಯ, ಸುರೇಖ, ವಿಜಯ, ಶುಭ, ಮಮತಾ, ಪ್ರಿಯಾ, ವಿದ್ಯಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಕೈ ಮಗ್ಗ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಕರೆ
ಮಂಗಳೂರು: ತುಳುನಾಡಿನ ಪಾರಂಪರಿಕ ಕೈ ಮಗ್ಗ ವೃತ್ತಿಗೆ ತುಳುನಾಡಿನ ಜನತೆ ಎಲ್ಲಾ ರೀತಿಯ ಸಹಕಾರ ಬೆಂಬಲ ಕೊಡಬೇಕು ಎಂದು ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ಡೀನ್ ಡಾ. ಅಮರಶ್ರೀ ಅಮರನಾಥ ಶೆಟ್ಟಿ ಅವರು ಹೇಳಿದರು.ಅವರು ಶನಿವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಕಿನ್ನಿಗೋಳಿ ನೇಕಾರ ಸೌಧದಲ್ಲಿ ಕದಿಕೆ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ ಕೈ...
ರೆಡ್‌ಕ್ರಾಸ್‌ನಿಂದ ಯೋಗ ದಿನಾಚರಣೆ
ಮಂಗಳೂರು : ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್ ಬಾಳ ಮಾತನಾಡಿ ‘...
ಜಗತ್ತಿಗೆ ಭಾರತ ನೀಡಿದ ಕೊಡುಗೆ ಯೋಗ: ಲೋಕಸಭಾ ಸದಸ್ಯ ಕ್ಯಾ.ಚೌಟ
ಮಂಗಳೂರು: ಯೋಗವು ಇಡೀ ಜಗತ್ತಿನ ಮನುಕುಲಕ್ಕೆ ಭಾರತ ನೀಡಿದ ಶ್ರೇಷ್ಠವಾದ ಕೊಡುಗೆಯಾಗಿದೆ ಎಂದು ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಇವರ ಆಶ್ರಯದಲ್ಲಿ ಆಯುಷ್ ಮಹಾವಿದ್ಯಾಲಯಗಳು ಹಾಗೂ ವಿವಿಧ ಯೋಗ ಸಂಘಟನೆಗಳ ಸಹಕಾರದೊಂದಿಗೆ ಶನಿವಾರ ನಗರದ ಪುರಭವನದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು...
ಕೆಎಸ್ ಆರ್ ಟಿಸಿ: ಮಂಗಳೂರು ವಿಭಾಗಕ್ಕೆ 100 ಎಲೆಕ್ಟ್ರಿಕಲ್ ಬಸ್‌ಗಳು ಮಂಜೂರು
ಮ೦ಗಳೂರು : ಕೆಎಸ್ ಆರ್ ಟಿಸಿ ಮಂಗಳೂರು ವಿಭಾಗಕ್ಕೆ ಪಿಎ೦-ಇ-ಬಸ್ ಸೇವಾ ಯೋಜನೆಯಡಿಯಲ್ಲಿ 100 ಎಲೆಕ್ಟ್ರಿಕಲ್ ಬಸ್‌ಗಳು ಮಂಜೂರಾಗಿದೆ.
ಈ ಬಸ್‌ಗಳು ಮಂಗಳೂರು ನಗರದಲ್ಲಿ ಕಾರ್ಯಾಚರಿಸಲು ಮಂಗಳೂರಿನ ಪಂಪ್‌ವಲ್‌ನಲ್ಲಿ ಮಹಾನಗರ ಪಾಲಿಕೆಯು ವಶಪಡಿಸಿಕೊಂಡಿರುವ 7 ಎಕರೆ ಜಾಗವನ್ನು ಕ.ರಾ.ರ.ಸಾ.ನಿಗಮಕ್ಕೆ ಉಚಿತವಾಗಿ ಹಸ್ತಾಂತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗು೦ಡೂರಾವ್ ಅವರು ದ.ಕ.ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದಾರೆ.ಎಲೆಕ್ಟ್ರಿಕಲ್ ...









