24.9 C
Karnataka
Thursday, April 30, 2026

ಮುಖ್ಯಮಂತ್ರಿಗಳು ಜನವರಿ 10 ರಂದು ಜಿಲ್ಲೆಗೆ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 10 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ.
ಜನವರಿ 10 ರಂದು ಸಂಜೆ 5- ಮಂಗಳೂರು ವಿಮಾನ ನಿಲ್ದಾಣ ಆಗಮನ, 5:30- ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ ಕಾರ್ಯಕ್ರಮ (ಹೋಟೆಲ್ ಅವತಾರ್, ಅತ್ತಾವರ), ರಾತ್ರಿ 7- ಪಿಲಿಕುಳದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಅಭಿವೃದ್ಧಿ ಪಡಿಸಿದ ಪಿಲಿಕುಳ ರೆಸಾರ್ಟ್ ಉದ್ಘಾಟನಾ ಸಮಾರಂಭ. ರಾತ್ರಿ ನಗರದಲ್ಲಿ ವಾಸ್ತವ್ಯ.
ಜನವರಿ 11 ರಂದು ಬೆಳಿಗ್ಗೆ 11:10 – ಮಂಗಳೂರಿನಿಂದ ಬೆಂಗಳೂರಿಗೆ ಮುಖ್ಯಮಂತ್ರಿಗಳು ತೆರಳಲಿದ್ದಾರೆ.

*ಕೃಷಿ ಸಚಿವರು ಜಿಲ್ಲೆಗೆ*
ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಜನವರಿ 10 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ.
ಅಂದು ಬೆಳಿಗ್ಗೆ 9:05- ಮಂಗಳೂರು ವಿಮಾನ ನಿಲ್ದಾಣ ಆಗಮನ, 10:30- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಗದ್ದೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜ ಇವರ ವತಿಯಿಂದ ಏರ್ಪಡಿಸಲಾಗಿರುವ ಮೈಸೂರು ವಿಭಾಗ ಮಟ್ಟದ ಕೃಷಿ ಹಾಗೂ ಸಸ್ಯ ಮೇಳ ಜಾತ್ರೆಯ ಉದ್ಘಾಟನಾ ಕಾರ್ಯಕ್ರಮ. ಮಧ್ಯಾಹ್ನ 2:15 – ಮಂಗಳೂರಿನಿಂದ ಸಚಿವರು ಬೆಂಗಳೂರಿಗೆ ತೆರಳಲ್ಲಿದ್ದಾರೆ.

*ಅರಣ್ಯ ಸಚಿವರ ಪ್ರವಾಸ*
ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಜನವರಿ 9 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ.
ಜನವರಿ 9 ರಂದು ಬೆಳಿಗ್ಗೆ 9:5- ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಮನ, 10- ಕದ್ರಿ ಉದ್ಯಾನವನದ ಹತ್ತಿರ ಹೊಸದಾಗಿ ನಿರ್ಮಾಣವಾಗಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವಿಭಾಗ ಕಚೇರಿ ಮತ್ತು ಇತರೆ ಇಲಾಖೆ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮ, 11- ಲಾಲ್‍ಬಾಗ್‍ನಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ವಸತಿಗೃಹದ ಶಂಕುಸ್ಥಾಪನಾ ಕಾರ್ಯಕ್ರಮ, 11:30- ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಕಚೇರಿ ಭೇಟಿ, ಮಧ್ಯಾಹ್ನ 1 – ಪಿಲಿಕುಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ 12ನೇ ಕರ್ನಾಟಕ ಹಕ್ಕಿ ಹಬ್ಬ, 2- ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಅರಣ್ಯ ಮತ್ತು ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪರಮರ್ಶನಾ ಸಭೆ , ಸಂಜೆ 4- ಮಂಗಳೂರಿನ ಸ್ಥಳೀಯ ಕಾರ್ಯಕ್ರಮ, 6:30- ಗುರುಪುರ ಮಠಕ್ಕೆ ಭೇಟಿ ನೀಡಲಿದ್ದಾರೆ.

*ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ*
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜನವರಿ 9 ರಿಂದ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಜನವರಿ 9 ರಂದು ಬೆಳಿಗ್ಗೆ 9.5 – ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಮನ, 9:30- ನಗರದ ಕದ್ರಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ನೂತನ ಕಚೇರಿಯ ಉದ್ಘಾಟನಾ ಸಮಾರಂಭ, 10- ಲಾಲ್‍ಬಾಗ್ ಕರಾವಳಿ ಮೈದಾನದ ಎದುರು ಉಪ ಅರಣ್ಯ ಸಂರಕ್ಷಣಾಧಿಕಾರಿ ವಸತಿಗೃಹ ಶಂಕುಸ್ಥಾಪನಾ ಸಮಾರಂಭ, 11- ಪಿಲಿಕುಳ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಭವನದಲ್ಲಿ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ಹಕ್ಕಿ ಹಬ್ಬ ಉದ್ಘಾಟನಾ ಕಾರ್ಯಕ್ರಮ, 2:45- ಪಡೀಲ್ ಪ್ರಜಾಸೌಧದಲ್ಲಿರುವ ಉಸ್ತುವಾರಿ ಸಚಿವರ ಕಛೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಸಂಜೆ 4 – ಪ್ರಜಾಸೌಧದಲ್ಲಿ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ, ಲೇಡಿಗೋಶನ್ ಆಸ್ಪತ್ರೆ ಹಾಗೂ ಕೆಎಂಸಿ ಆಸ್ಪತ್ರೆಗಳ ಜೊತೆಗಿನ ಸಹಭಾಗಿತ್ವದ ಕುರಿತು ಸಭೆ, 5- ಪ್ರಜಾಸೌಧದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕಕ್ಕೆ ಚಾಲನೆ, 6- ಪಿಲಿಕುಳದಲ್ಲಿ ಗಾಲ್ಫ್ ಕ್ಲಬ್ ಉದ್ಘಾಟನೆ.
ಜನವರಿ 10 ರಂದು ಬೆಳಿಗ್ಗೆ 9- ಪಡೀಲ್ ಪ್ರಜಾಸೌಧದಲ್ಲಿರುವ ಉಸ್ತುವಾರಿ ಸಚಿವರ ಕಛೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ, 5:30- ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ ಕಾರ್ಯಕ್ರಮ, 7- ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಅಭಿವೃದ್ಧಿ ಪಡಿಸಿದ ಪಿಲಿಕುಳ ರೆಸಾರ್ಟ್ ಉದ್ಘಾಟನಾ ಸಮಾರಂಭ, 8:30 -ನರಿಂಗಾನದಲ್ಲಿ 4ನೇ ಹೊನಲು ಬೆಳಕಿನ ಲವಕುಶ ಜೋಡು ಕರೆ ಕಂಬಳ ಕಾರ್ಯಕ್ರಮ, ರಾತ್ರಿ ಸಕ್ರ್ಯೂಟ್ ಹೌಸ್‍ನಲ್ಲಿ ವಾಸ್ತವ್ಯ.
ಜನವರಿ 11 ರಂದು ಬೆಳಿಗ್ಗೆ 6:15 ಸಚಿವರು ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles