ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ಪಾವತಿ ರಶೀದಿಯ ನಕಲಿ ಸೃಷ್ಠಿ ಮತ್ತು ವಂಚನೆ: ಆರೋಪಿಯ ಬಂಧನ
ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆಯ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ಪಾವತಿ ರಶೀದಿಯ ನಕಲಿ ಸೃಷ್ಠಿ ಮತ್ತು ವಂಚನೆ ಪ್ರಕರಣದ ಆರೋಪಿಯನ್ನು ಪೊಲೀಸರು ಬ೦ಧಿಸಿದ್ದಾರೆ. ಮಂಗಳೂರು ಉಜ್ಜೋಡಿ ನಿವಾಸಿ ಪೃಥ್ವಿರಾಜ್ ಶೆಟ್ಟಿ @ ಮುನ್ನ (25 ) ಬಂಧಿತ ಆರೋಪಿ.
ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ...
ತೆಕ್ಕಾರು : ಪತಿಯಿ೦ದ ಪತ್ನಿಯ ಕೊಲೆ
ಮ೦ಗಳೂರು: ಪತ್ನಿಯನ್ನು ಪತಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ತೆಕ್ಕಾರು ಗ್ರಾಮದ ಬಾಜಾರು ಎಂಬಲ್ಲಿ ಗುರುವಾರ ನಡೆದಿದೆ. ಝೀನತ್ (40) ಕೊಲೆಯಾದವರು. ರಫೀಕ್ ಕೊಲೆ ಮಾಡಿದ ಆರೋಪಿ.
ಬಾಜಾರು ಎಂಬಲ್ಲಿ ವಾಸವಿದ್ದ ಝೀನತ್ ಎಂಬವರಿಗೆ, ರಫೀಕ್ ಎಂಬಾತನೊಂದಿಗೆ ಸುಮಾರು 18 ವರ್ಷದ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿರುತ್ತಾರೆ. ದಂಪತಿಗಳಿಗೆ ಕಳೆದ ಕೆಲವು...
ಲಂಚಕ್ಕೆ ಬೇಡಿಕೆ: ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ಲೋಕಾಯುಕ್ತ ಪೊಲೀಸರ ಬಲೆಗೆ
ಮ೦ಗಳೂರು: ಕಾರನ್ನು ಪೊಲೀಸ್ ಠಾಣೆಯಿಂದ ಬಿಡಿಸಿಕೊಡಲು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ 5000 ರೂ. ಲಂಚಕ್ಕೆ ಬೇಡಿಕೆ ಇಟ್ಟು ಹಣವನ್ನು ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಪೊಲೀಸ್ ಠಾಣೆಯ ಸಿಹೆಚ್‌ಸಿ ತಸ್ಲಿಂ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಸಿಬ್ಬ೦ದಿ. ಸಿಬ್ಬಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಕಾರು ಮತ್ತು ಸ್ಕೂಟರ್ ಮಧ್ಯೆ ನಂತೂರು...
ಯುವತಿಗೆ ಇರಿದು ಯುವಕ ಆತ್ಮಹತ್ಯೆ
ಮ೦ಗಳೂರು: ಯುವಕನೋವ೯ ಪ್ರೀತಿಸುತ್ತಿದ್ದ ಯುವತಿಯ ಜತೆ ಜಗಳ ಮಾಡಿ ಆಕೆಗೆ ಚಾಕುವಿನಿಂದ ಇರಿದು ಬಳಿಕ ಆತ್ಮಹತ್ಯೆ ಮಾಡಿಕೊ೦ಡಿರುವ ಘಟನೆ ಫರಂಗಿಪೇಟೆ, ಸುಜೀರ್ ಮಲ್ಲಿ ಎಂಬಲ್ಲಿ ಸೋಮವಾರ ಸ೦ಭವಿಸಿದೆ. ಫರಂಗಿಪೇಟೆ ನಿವಾಸಿ ದಿವ್ಯಾ ಯಾನೆ ದೀಕ್ಷಿತಾ (26) ಇರಿತಕ್ಕೊಳಗಾದ ಯುವತಿಯಾಗಿದ್ದು, ಕೋಡ್ಮನ್ ನಿವಾಸಿ ಸುಧೀರ್ (30) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ,
ದಿವ್ಯಾ ಯಾನೆ ದೀಕ್ಷಿತಾ (26)...
ತಲೆಮರೆಸಿಕೊಂಡಿದ್ದ ಕೊಲೆ ಆರೋಪಿಯ ಬಂಧನ
ಮ೦ಗಳೂರು: ಮುಲ್ಕಿ ಬಳಿ 2020ರಲ್ಲಿ ಹಾಡುಹಗಲಿನಲ್ಲಿ ನಡೆದ ಹತ್ಯ ಪ್ರಕರಣದಲ್ಲಿ ಸುಮಾರು ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬ೦ಧಿಸಿದ್ದಾರೆ. ಮೊಹಮ್ಮದ್ ಮುಸ್ತಫಾ ಬ೦ಧಿತ ಆರೋಪಿ.
ದಿನಾಂಕ ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಮುಲ್ಕಿ ವಿಜಯ ಸನ್ನಿದಿ ಹೆದ್ದಾರಿ ಬಳಿ ರಸ್ತೆಯಲ್ಲಿ 5-06-2020 ರಂದು ಹಾಡುಹಗಲಿನಲ್ಲಿ ಅಬ್ದುಲ್ ಲತೀಫ್ ಎಂಬವರನ್ನು...
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: 8 ಮಂದಿ ಬಂಧನ
ಮ೦ಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ .ಅಬ್ದುಲ್ ಸಫ್ವಾನ್(29) ನಿಯಾಜ್(28), ಮೊಹಮ್ಮದ್ ಮುಝುಮಿಲ್(32), ಕಲಂದರ್ ಶಾಫಿ(31), ಮೊಹಮ್ಮದ್ ರಿಜ್ವಾನ್(28) ಆದಿಲ್ ಮೆಹರೂಫ್ , ಕಳಸದ ರಂಜಿತ್(19) ನಾಗರಾಜ್(2೦) ಬಂಧಿತ ಆರೋಪಿಗಳು .
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಶನಿವಾರ ಮಂಗಳೂರಿಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ...
ಅಪರಿಚಿತ ಯುವಕನ ಮೃತದೇಹ ಪತ್ತೆ ಪ್ರಕರಣ ; 15 ಮಂದಿ ಬ೦ಧನ
ಮಂಗಳೂರ: ಕುಡುಪು ಬಳಿ ಸಂಶಯಾಸ್ಪದ ರೀತಿಯಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದ೦ತೆ ಪೊಲೀಸರು 15 ಮಂದಿಯನ್ನು ಬ೦ಧಿಸಿದ್ದಾರೆ.ಕುಡುಪು ನಿವಾಸಿಗಳಾದ ಸಚಿನ್ ಟಿ (26), ದೇವದಾಸ್ (50), ಮಂಜುನಾಥ್ (32), ಸಾಯಿದೀಪ್ (29), ನಿತೇಶ್ ಕುಮಾರ್ ಅಲಿಯಾಸ್ ಸಂತೋಷ್ (33), ದೀಕ್ಷಿತ್ ಕುಮಾರ್ (32), ಸಂದೀಪ್ (23), ವಿವಿಯನ್ ಆಳ್ವಾರೀಸ್ (41), ಶ್ರೀದತ್ತ...
ಮುತ್ತೂಟ್ ಫೈನಾನ್ಸ್ ದರೋಡೆಗೆ ಯತ್ನ: ಇಬ್ಬರ ಬ೦ಧನ
ಮಂಗಳೂರು: ದೇರಳಕಟ್ಟೆ ಜಂಕ್ಷನ್ ನಲ್ಲಿರುವ ಮುತ್ತೂಟ್ ಫೈನಾನ್ಸ್ ಶಾಖೆ ದರೋಡೆಗೆ ಯತ್ನಿಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ.ದರೋಡೆಗೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬ೦ಧಿಸಿದ್ದಾರೆ.ಕಳ್ಳರು ಬೀಗ ಒಡೆಯುತ್ತಿರುವ ಸ೦ದಭ೯ದಲ್ಲಿ ಫೈನಾನ್ಸ್ ಮಳಿಗೆಗೆ ಅಳವಡಿಸಿದ್ದ ಸೈರನ್ ಮೊಳಗಿದ್ದು, ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ದೇರಳಕಟ್ಟೆ ಜಂಕ್ಷನ್ ನಲ್ಲಿರುವ ವಾಣಿಜ್ಯ ಕಟ್ಟಡವೊ೦ದರ ಮೇಲಂತಸ್ತಿನಲ್ಲಿ...
ಮಂಗಳೂರು ಪೋಲಿಸರ ಕಾರ್ಯಚರಣೆ,75 ಕೋಟಿ ಮೌಲ್ಯದ 38 ಕೆ.ಜಿ ಎಂಡಿಎಂಎ ಡ್ರಗ್ಸ್ ವಶ
ಮ೦ಗಳೂರು: ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಜಾಲವೊಂದನ್ನು ಮಂಗಳೂರು ಪೊಲೀಸರು ಬೇಧಿಸಿದ್ದು ಸುಮಾರು 75 ಕೋಟಿ ರೂ ಮೌಲ್ಯದ 37.87 ಕಿಲೋ ಎಂಡಿಎಂಎ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಬಂಬಾ ಫಂಟಾ (31) ಮತ್ತು ಅಬಿಗೈಲ್ ಅಡೊನಿಸ್ (30) ಎಂಬವರನ್ನು ಬೆಂಗಳೂರಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪಂಪ್ ವೆಲ್...
ಇ. ಡಿ. ಅಧಿಕಾರಿಗಳ ಸೋಗಿನಲ್ಲಿ ಬಂದು 30 ಲಕ್ಷ ರೂ.ವಂಚಿಸಿದ ಪ್ರಕರಣ: ಇನ್ನೂ ನಾಲ್ವರು ಆರೋಪಿಗಳ ಸೆರೆ
ಮ೦ಗಳೂರು: ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರು ನಾರ್ಶ ಎಂಬಲ್ಲಿ ಉದ್ಯಮಿಯೊಬ್ಬರ ಮನೆಗೆ ಇ ಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ಸುಮಾರು 30 ಲಕ್ಷ ನಗದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳಿಯ ಕೊಳ್ನಾಡು ನಿವಾಸಿ ಸಿರಾಜುದ್ದೀನ್ (37) ಬಂಟ್ವಾಳ ನಿವಾಸಿ ಮೊಹಮ್ಮದ್ ಇಕ್ಬಾಲ್ (38) ಮಂಗಳೂರು ಪಡೀಲ್ ನಿವಾಸಿ...



